ತಮಿಳು ನಟ ವಿಜಯ್ ಸೇತುಪತಿ ಪುತ್ರಿಗೆ ಅತ್ಯಾಚಾರದ ಬೆದರಿಕೆ

ಚೆನ್ನೈ: ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರ ‘800’ ಸಿನಿಮಾದಿಂದ ವಿಜಯ್ ಸೇತುಪತಿ ಹೊರಬಂದಿದ್ದಾರೆ. ಆದರೂ ಅವರನ್ನು ಗುರಿಯಾಗಿಸಿಕೊಂಡು ನೆಟ್ಟಿಗರು ನಡೆಸುತ್ತಿರುವ ದಾಳಿಗಳು ನಿಂತಿಲ್ಲ. ಇದೀಗ ದುಷ್ಕರ್ಮಿಯೊಬ್ಬ ಟ್ವೀಟರ್ ನಲ್ಲಿ ವಿಜಯ್‌ ಸೇತುಪತಿಯ ಮಗಳ ಮೇಲೆ ಅತ್ಯಾಚಾರದ ಬೆದರಿಕೆ ಒಡ್ಡಿದ್ದಾನೆ.

ತಮಿಳರಿಗೆ ಆದ ನೋವು ವಿಜಯ್‌ ಸೇತುಪತಿಗೆ ಮನದಟ್ಟಾಗಬೇಕಾದರೆ ಅವರ ಮಗಳನ್ನು ಲೈಂಗಿಕವಾಗಿ ಶೋಷಣೆ ಮಾಡಬೇಕು ಎಂದು ಟ್ವಿಟರ್‌ ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾನೆ. ಈತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬಾಲಕಿಗೆ ಬೆದರಿಕೆ ಹಾಕಿದವನನ್ನು ಕೂಡಲೇ ಬಂಧಿಸಬೇಕೆಂದು ಗಾಯಕಿ ಚಿನ್ಮಯಿ ಶ್ರೀಪಾದ್‌, ಧನ್ಯಾ ರಾಜೇಂದ್ರನ್‌, ಎಸ್‌. ಸೇಂಥಿಲ್‌ ಕುಮಾರ್‌ ಸೇರಿ ಹಲವು ಮಂದಿ ಒತ್ತಾಯಿಸಿದ್ದಾರೆ.