ಉಡುಪಿ: 50ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

ಉಡುಪಿ: ಇಲ್ಲಿನ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ ಅವರ 64 ನೇ ಧಮ್ಮ ಚಕ್ರ ಪ್ರವರ್ತನಾ ದಿನಾಚರಣೆಯಲ್ಲಿ ಜಿಲ್ಲೆಯ 50ಕ್ಕೂ ಅಧಿಕ ದಲಿತರು ಬೌದ್ಧಧರ್ಮಕ್ಕೆ ಸೇರ್ಪಡೆಗೊಂಡರು.‌

ಉಡುಪಿ ಜಿಲ್ಲಾ ಬೌದ್ಧ ಮಹಾ ಸಭಾ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಕೊಳ್ಳೆಗಾಲದ ಜೀವನ ಬುದ್ಧ ವಿಹಾರದಿಂದ ಆಗಮಿಸಿದ್ದ ಸುಗತಪಾಲ ಭಂತೇಜಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪ್ರಮಾಣವಚನ ಬೋಧಿಸಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಾಧಿಕ ಅಂಕಗಳಿಸಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯಧನವನ್ನು ನೀಡಿ ಸನ್ಮಾನಿಸಲಾಯಿತು.

ಉಪನ್ಯಾಸಕ ಭಾಸ್ಕರ್ ವಿಟ್ಲ ಮುಖ್ಯ ಭಾಷಣ ಮಾತನಾಡಿದರು. ದಲಿತ ನಾಯಕರಾದ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ನಾರಾಯಣ ಮಣೂರು, ಶೇಖರ್ ಹೆಜಮಾಡಿ, ಶೇಖರ ಹಾವಂಜೆ, ಶಂಭು ಮಾಸ್ಟರ್, ಪುಷ್ಪಾಕರ್, ಮಂಜುನಾಥ್ ಗಿಳಿಯಾರು, ಅಣ್ಣಪ್ಪ ನಕ್ರೆ, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ್. ವಿ., ಕೀರ್ತಿಕುಮಾರ್ ಪಡುಬಿದ್ರಿ, ವಿಠಲ ತೊಟ್ಟಂ, ರವೀಂದ್ರ ಬಂಟಕಲ್ಲು, ರಾಘವೇಂದ್ರ ಬೆಳ್ಳೆ, ರಾಜೇಂದ್ರ ಬೆಳ್ಳೆ, ಭಾಸ್ಕರ್ ಮಾಸ್ತರ್ ಕುಂಜಿಬೆಟ್ಟು, ವಿಠಲ ಉಚ್ಚಿಲ , ಗೋಪಾಲಕೃಷ್ಣ ಕುಂದಾಪುರ, ಮಂಜುನಾಥ ಬಾಳ್ಕುದ್ರು, ಸುರೇಶ ಬಾರ್ಕೂರು , ಕೃಷ್ಣ, ಪರಮೇಶ್ವರ್ ಉಪ್ಪೂರು, ಅಜಯ ಕುಮಾರ್, ಆನಂದ ಬ್ರಹ್ಮಾವರ, ಮುರಳಿಧರ್, ರಮೇಶ್, ಉಪಸ್ಥಿತರಿದ್ದರು.