ಲಡಾಖ್: ಅಕ್ರಮವಾಗಿ ಭಾರತದ ಗಡಿ ಪ್ರದೇಶದೊಳಗೆ ನುಸುಳಲು ಯತ್ನಿಸಿದ ಚೀನಾ ಯೋಧನ ಬಂಧನ

ಲಡಾಖ್: ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸಿದ ಚೀನಾದ ಯೋಧನೊರ್ವನನ್ನು ಭಾರತೀಯ ಸೇನಾಪಡೆ ಬಂಧಿಸಿದೆ.

ವಶಕ್ಕೆ ಪಡೆದ ಚೀನಾದ ಯೋಧನನ್ನು ಭಾರತೀಯ ಸೇನೆ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನಿಂದ ಭೂಪಟಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ.

ತನಿಖೆ ಮುಗಿದ ನಂತರ ಪ್ರೋಟೋಕಾಲ್ ಪ್ರಕಾರ ಆನನ್ನು ಚೀನಾಗೆ ವಾಪಾಸ್ ಕಳಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಲಡಾಖ್ ನಲ್ಲಿ  ನಡೆಯುತ್ತಿರುವ ಗಡಿ ಸಂಘರ್ಷದ ನಡುವೆ ಈ ಬೆಳವಣಿಗೆ ನಡೆದಿರುವ ಕಾರಣ ತನಿಖಾ ಸಂಸ್ಥೆಗಳು ಗೂಢಚರ್ಯೆ ದೃಷ್ಟಿಕೋನದಿಂದ ತನಿಖೆ ಕೈಗೊಂಡಿವೆ. ಚಿಣಾ ಸೇನೆ ಈ ಭಾಗದ ಭಾರತೀಯ ಸೈನ್ಯದ ತಾಣಗಳ ಮೇಲೆ ಬೇಹುಗಾರಿಕೆ ನಡೆಸಿರಬಹುದೆಂದು ಅನುಮಾನ ವ್ಯಕ್ತವಾಗಿದೆ.