ಕುಂದಾಪುರ: ತಾಲ್ಲೂಕಿನ ವಕ್ವಾಡಿ ಗ್ರಾಮದ ಬೆಚ್ಚಾಡಿ ನಿವಾಸಿ ಶರತ್ (29) ಎಂಬುವವರು 2019ರ ಆಗಸ್ಟ್ 8ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶರತ್ 2019ರ ಆಗಸ್ಟ್ 8ರಂದು ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ತೆರಳಿದ್ದರು. ಬಳಿಕ ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಪತ್ನಿ ಅನುಪಮ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.