ಉಡುಪಿ: ಆಂಧ್ರಪ್ರದೇಶ ಫೋಟೋಗ್ರಾಫರ್ಸ್ ಅಸ್ಸೊಸಿಯೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರು ಸೆರೆ ಹಿಡಿದಿರುವ ಛಾಯಾಚಿತ್ರಕ್ಕೆ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಪುರಸ್ಕಾರ ಲಭಿಸಿದೆ.
ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕಾಲವಾದ ಸಂದರ್ಭದಲ್ಲಿ ಅವರಿಗೆ ಸಲ್ಲಿಸಲಾದ ಸರಕಾರಿ ಗೌರವವನ್ನು ಸೂಚಿಸುವ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ.