ಉಡುಪಿ: ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ನಡೆದ ಕಣ್ಣಿನ ತಪಾಸಣೆ ಮತ್ತು 300 ಹೆಚ್ಚು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಕಣ್ಣಿನ ತಪಾಸಣೆ ಮಾಡಿಸಿಕೊಂಡ 1,236
ಫಲಾನುಭವಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಉಚಿತ ಕನ್ನಡಕಗಳನ್ನು ಭಾನುವಾರ ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ವಿತರಿಸಿದರು.
ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಮೋರ್ಚಾ ಮತ್ತು ಪ್ರಸಾದ ನೇತ್ರಾಲಯದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಸೆಲ್ಯುಲಾರ್ ಫೌಂಡೇಶನ್ನ ಸಂಚಾಲಕ ಧರ್ಮಪ್ರಸಾದ ರೈ ಉತ್ತಮ ಗುಣಮಟ್ಟದ ಕನ್ನಡಕವನ್ನು ಉಚಿತವಾಗಿ ನೀಡಿದರು.
ಪ್ರಸಾದ ನೇತ್ರಾಲಯದ ಡಾ ಕೃಷ್ಣ ಪ್ರಸಾದ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗದ ಪ್ರಭಾರ ಉದಯಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಯಶಪಾಲ ಸುವರ್ಣ, ನಗರ ಅಧ್ಯಕ್ಷ ಮಹೇಶ ಠಾಕೂರ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಉಸ್ತುವಾರಿ ಗೀತಾಂಜಲಿ ಸುವರ್ಣ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಜಿ.ಪಂ.ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಜಿಲ್ಲಾಾ ವಕ್ತಾರ ಗುರುಪ್ರಸಾದ ಶೆಟ್ಟಿ, ಸಹವಕ್ತಾರ ಶಿವಕುಮಾರ್.
ಮಹಿಳಾ ಮೋರ್ಚಾದ ರಮಾ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಮಾಯಾ ಕಾಮತ್, ಸೋನಾ ಪಾಯ್ದೆ , ರಜನಿ ಹೆಬ್ಬಾರ್, ದಯಾಶಿನಿ, ಲೈಲಾ, ಕುಂದಾಪುರ ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪ ಪೈ, ಗ್ರಾಮಾಂತರ ಅಧ್ಯಕ್ಷೆ ವಸಂತಿ, ನಗರ ಅಧ್ಯಕ್ಷೆ ಸರೋಜ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕೇಸರಿ ಯುವರಾಜ್ ವಂದಿಸಿದರು.