ಡಿಕೆಶಿ ಮನೆಯ ಮೇಲಿನ ಸಿಬಿಐ ದಾಳಿ ಖಂಡಿಸಿ ಪ್ರತಿಭಟನೆ: ಬಿಜೆಪಿಯ ಷಡ್ಯಂತ್ರಗಳಿಗೆ ನಾವು ಜಗ್ಗಲ್ಲ- ಕೃಷ್ಣಮೂರ್ತಿ ಆಚಾರ್ಯ

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಯ ಮೇಲಿನ ಸಿಬಿಐ ದಾಳಿ ಖಂಡಿಸಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ ಉಡುಪಿ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಅಜ್ಜರಕಾಡುವಿನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು, ಬಿಜೆಪಿಗೆ ಕಾಂಗ್ರೆಸ್ ಅನ್ನು ನೇರವಾಗಿ ಎದುರಿಸುವ ತಾಕತ್ತು ಇಲ್ಲ. ಅದಕ್ಕಾಗಿ ಸಿಬಿಐನಂತಹ ಸಂಸ್ಥೆಗಳನ್ನು ಎದುರು ಬಿಟ್ಟು ಕಾಂಗ್ರೆಸ್ ಮುಖಂಡರನ್ನು ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಷಡ್ಯಂತ್ರಗಳಿಗೆ ನಾವು ಜಗ್ಗುವುದಿಲ್ಲ. ಡಿಕೆ ಶಿವಕುಮಾರ್ ಅವರಿಗೆ ಎಲ್ಲ ಸವಾಲುಗಳನ್ನು ಎದುರಿಸುವ ಶಕ್ತಿಯಿದೆ ಎಂದರು.

ಉಡುಪಿ ನಗರಸಭೆ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ವಿಜಯ ಪೂಜಾರಿ ಬೈಲೂರು, ನಗರಸಭೆಯ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು, ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಚರಣ್ ರಾಜ್ ಬಂಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಶೇರಿಗಾರ್, ನಗರ ಅಧ್ಯಕ್ಷ ಸುಹಾಸ್, ಕಾರ್ಯದರ್ಶಿ ಭುವನೇಶ್, ಉದಯ ನಾಯ್ಕ್, ಧೀರಜ್, ಸುನಿಲ್ ಬೈಲಕೆರೆ, ನವೀನ್ ಅಮೀನ್, ಪುರಂದರ ಸಾಲಿಯಾನ್, ಅನಿಲ್ ಮೆಂಡನ್, ಪ್ರಣಮ್, ಶೈಲೇಂದ್ರ, ಮಂಜುನಾಥ್, ಶಿವಾನಂದ.

ಎನ್ಎಸ್ ಯುಐ ಅಧ್ಯಕ್ಷ ಸೌರಭ್ ಬಲ್ಲಾಳ್, ಪಕ್ಷದ ಮುಖಂಡರಾದ ಆರ್.ಕೆ. ರಮೇಶ್, ಯಾದವ ಕರಂಬಳ್ಳಿ, ಜಯರಾಮ್ , ಲಕ್ಷ್ಮಣ್ ಪೆರಂಪಳ್ಳಿ, ಸತೀಶ್ ಪುತ್ರನ್, ರಫೀಕ್, ಪ್ರವೀಣ್, ಹರೀಶ್ ಅಮೀನ್, ರಕ್ಷಿತ್, ಸುರೇಶ್ ಆಚಾರ್ಯ, ಸಂಧ್ಯಾ ತಿಲಕ್ ರಾಜ್, ಲತಾ ಆನಂದ ಹಾಗೂ ನೂರಾರು ಡಿಕೆಶಿ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.