ಉಡುಪಿ ಸೆ.16: ಕಾರ್ಕಳದ ಸಂಘದ ಕಛೇರಿ ಪ್ರಸಾದ ಭವನದಲ್ಲಿ ಸ್ಥಾನಿಕ ದ್ರಾವಿಡ ಬ್ರಾಹ್ಮಣ ಸಂಘ ಕಾರ್ಕಳ ವಲಯದ ಶ್ರೀ ಶಂಕರ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯು ಸೆ.೧೨ ರಂದು ಅಪರಾಹ್ನ ನೆರವೇರಿತು.
ಈ ಸಂದರ್ಭದಲ್ಲಿ 2019 -20 ನೇ ಸಾಲಿನಲ್ಲಿ ದ್ವಿತೀಯ .ಪಿ.ಯು.ಸಿ. ಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕು.ಪ್ರದೀಪ್ ರಾವ್ ಹೊಸ್ಮಾರ್, ಕುಮಾರಿ ಪ್ರಜ್ಞಾಶ್ರೀ ಹೆಬ್ಬಾರ್ ಬೈಲೂರು, ಕು.ಸುಜನ್ ರಾವ್ ಕಾರ್ಕಳ, ಹಾಗೂ ಕುಮಾರಿ.ಅನನ್ಯ ಹೆಬ್ಬಾರ್ ಕಬ್ಬಿನಾಲೆ, ಮತ್ತು ಎಸ್.ಎಸ್.ಎಲ್.ಸಿ.ಯ ಕು.ಕಾರ್ತಿಕ್ ಹೆಬ್ಬಾರ್ ಕಾರ್ಕಳ, ಹಾಗೂ ಕು.ಶ್ರೀವತ್ಸ ರಾವ್ ಬಜಗೋಳಿ ಇವರಿಗೆ ಪ್ರತಿಷ್ಠಾನ ಹಾಗೂ ಸಮಾಜದ ಧಾನಿಗಳ ವತಿಯಿಂದ, ವಿದ್ಯಾರ್ಥಿವೇತನವನ್ನು ನೀಡಿ ಸನ್ಮಾನಿಸಲಾಯಿತು. ಹಾಗೆಯೇ ಜಿಲ್ಲೆಯಲ್ಲಿಯ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ಶ್ರೀ.ಕೆ. ಸತೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಮಾನ್ಯ ಕೇಶವ ರಾವ್ ಕುಕ್ಕುಂದೂರು, ಶ್ರೀ ರತ್ನಾಕರ ರಾವ್ ಕೊಕ್ರಾಡಿ, ಕಾರ್ಯದರ್ಶಿ ಹರಿಶ್ಚಂದ್ರ ರಾವ್ ಕರ್ವಾಲು, ಖಜಾಂಚಿ ಕೋದಂಡ ರಾಮ ರಾವ್, ಕೆ ರಮೇಶ್ ರಾವ್ ( ಸಿ.ಎ.), ಶ್ರೀ ರಾಮ್ ಮೋಹನ್ ರಾವ್ ಮುನಿಯಾಲು, ಶ್ರೀಮತಿ. ಶೈಲಾ ರಮೇಶ್ ರಾವ್,ಶ್ರೀಮತಿ ಐ.ಕೆ.ಪ್ರಭಾವತಿ.ಹಾಗೂ ಶ್ರೀಮತಿ ಸಾವಿತ್ರಿ ಮನೋಹರ ರಾವ್ ಕಾರ್ಕಳ ಇವರು ಉಪಸ್ಥಿತರಿದ್ದರು. ಶ್ರೀಮತಿ ಶೈಲಾ ರಾವ್ ಸ್ವಾಗತಿಸಿ, ಶ್ರೀ ಸುಬ್ರಹ್ಮಣ್ಯ ರಾವ್ ಧನ್ಯವಾದವನ್ನು ನೀಡಿ, ಶ್ರೀಮತಿ ಸೌಮ್ಯಾ ಭವಾನಿ ಶಂಕರ ರಾವ್ ಕಾರ್ಯಕ್ರಮ ನಿರ್ವಹಿಸಿದರು.