ಉಡುಪಿ: ತಾಯ್ನಾಡಿಗೆ ಮರಳುತ್ತಿದ್ದ ಉಡುಪಿ ಶಿರ್ವ ಮೂಲದ ಗಿರಿಜಾ(63) ಎಂಬವರನ್ನು ಕುವೈಟ್ ಸಿಐಡಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ.
ಗಿರಿಜಾ ಅವರು ಕಳೆದ 28 ವರ್ಷಗಳಿಂದ ಕುವೈಟ್ ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳಿನಿಂದ ಕೆಲಸ ವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ ಅವರು ಅನಾರೋಗ್ಯಕ್ಕೂ ತುತ್ತಾಗಿದ್ದರು. ಇದನ್ನು ತಿಳಿದ ಅವರ ಪುತ್ರಿ ಊರಿಗೆ ಗಿರಿಜಾಗೆ ತಿಳಿಸಿದ್ದರು.
ಅದರಂತೆ ಊರಿಗೆ ಬರಲು ನಿರ್ಧರಿಸಿದ ಗಿರಿಜಾ ಅವರು, ಸೆ.13ರಂದು ಇಂಡಿಗೋ ವಿಮಾನದ ಟಿಕೆಟ್ ಮಾಡಿದ್ದರು. ಆದರೆ ತಾಯ್ನಾಡಿಗೆ ಬರುವ ಸಂಭ್ರಮದಲ್ಲಿದ್ದ ಗಿರಿಜಾಗೆ ಕುವೈಟ್ ಪೊಲೀಸರು ವಿಮಾನ ನಿಲ್ದಾಣದಲ್ಲಿ ದಿಢೀರ್ ಆಗಿ ಬಂಧಿಸುವ ಮೂಲಕ ಆಘಾತ ನೀಡಿದ್ದರು.
ಊರಿಗೆ ಬರುತ್ತಿದ್ದ ಗಿರಿಜಾ ಅವರಿಗೆ ಕೆಲಸ ಮಾಡುತ್ತಿದ್ದ ಮನೆ ಯಜಮಾನ ನಾಪತ್ತೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಗಿರಿಜಾ ಅವರು ಕುವೈಟ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಸುದ್ದಿ ಪುತ್ರಿಗೆ ತಿಳಿಯುತ್ತಿದ್ದಂತೆ. ಆಕೆ ಆಡಿಯೋ ಮೂಲಕ ‘ತಾಯಿಯನ್ನು ಊರಿಗೆ ಕಳುಹಿಸಲು ಅನಿವಾಸಿ ಭಾರತೀಯ ಸಂಘಟನೆಗಳು ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.
ಕುವೈಟ್ ಕರ್ನಾಟಕ ಮುಸ್ಲಿಂ ಅಸೋಸಿಯೇಷನ್, ಅನಿವಾಸಿ ಭಾರತೀಯ ಫೋರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರ ಗಮನಕ್ಕೆ ತಂದಿದ್ದಾರೆ. ಅವರು ಕುವೈಟ್ ಅವರು ಗಿರಿಜಾ ಅವರನ್ನು ಊರಿಗೆ ಕರೆತರುವ ನಿಟ್ಟಿನಲ್ಲಿ ಕುವೈಟ್ ರಾಯಭಾರಿ ಕಚೇರಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಹಾಗಾಗಿ ಗಿರಿಜಾ ಶೀಘ್ರವೇ ತಾಯ್ನಾಡಿಗೆ ಮರಳುವ ನಿರೀಕ್ಷೆ ಮೂಡಿದೆ.