ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಬಿಗ್ ಬಜಾರ್ ಉಡುಪಿ ವತಿಯಿಂದ ಆಯೋಜಿಸಿದ್ದ ಹತ್ತನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ (ಆನ್ ಲೈನ್ ಮೂಲಕ)ಯಲ್ಲಿ ಹಿರಣ್ಮಯೀ ಭಟ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಇದೇ ವಿಭಾಗದಲ್ಲಿ ಸಹನ್ ಜೆ. ಅಮೀನ್ ದ್ವಿತೀಯ ಹಾಗೂ ಅನ್ವಿಕಾ ಅನಿಲ್ ಪೈ ತೃತೀಯ ಸ್ಥಾನ ಗಳಿಸಿದ್ದಾರೆ.
ಬಾಲಕೃಷ್ಣ ವಿಭಾಗದಲ್ಲಿ ಶ್ರೀಯಾ ಎಸ್. ಕಾಂಚನ್ ಪ್ರಥಮ, ಅಯನ ಎಂ. ಪೈ ದ್ವಿತೀಯ ಹಾಗೂ ಅದ್ವಿತ್ ಕುಲಾಲ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಿಶೋರ ಕೃಷ್ಣ ವಿಭಾಗದಲ್ಲಿ ಪ್ರತ್ಯುಷ ಪಿ. ನಾಯ್ಕ್ ಪ್ರಥಮ, ಸನ್ನಿಧಿ ದ್ವಿತೀಯ ಹಾಗೂ ಎಂ.ಎಸ್. ತೃತೀಯ ಸ್ಥಾನ ಗಳಿಸಿದ್ದಾರೆ.
ಸ್ಪರ್ಧೆಯ ತೀರ್ಪುಗಾರರಾಗಿ ಈಶ್ವರ್ ಚಿಟ್ಪಾಡಿ ಹಾಗೂ ಕರ್ವಾಲು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ ಸಹಕರಿಸಿದರು.
ಬಿಗ್ ಬಜಾರ್ ಉಡುಪಿ ಯೂನಿಟ್ ಮುಖ್ಯಸ್ಥ ರಾಘವೇಂದ್ರ ಕೆ., ಡಿಪಾರ್ಟ್ಮೆಂಟ್ ಮ್ಯಾನೇಜರ್ ಗಳಾದ ದೀಪಕ್, ಅಶೋಕ್, ವಿನೋದ್, ಸಚಿನ್, ಆಪರೇಶನ್ ಮ್ಯಾನೇಜರ್ ನಾಗರಾಜ್, ಮಾನವ ಸಂಪನ್ಮೂಲ ಅಧಿಕಾರಿ ರಂಜಿತ್ ಉಪಸ್ಥಿತರಿದ್ದರು.
ಈ ಸ್ಪರ್ಧೆಗೆ ಉಡುಪಿXPRESS ಮಾಧ್ಯಮ ಸಹಯೋಗ ನೀಡಿತ್ತು.