ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಆದರ್ಶ ತಂಡ, 14 ಬಾರಿ ರಾಜ್ಯದ ಅತಿ ಶಿಸ್ತಿನ ತಂಡ ಪ್ರಶಸ್ತಿ ಪಡೆದ,ಹಲವಾರು ಪ್ರತಿಷ್ಟಿತ ಟ್ರೋಫಿ ಗಳಿಸಿ, ಸುಮಾರು ಮೂರು ದಶಕಗಳಿಂದ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಗಳನ್ನು ಸಂಘಟಿಸಿ ವಿಶ್ವಕ್ಕೆ ಮಾದರಿಯಾದ ಟೆನ್ನಿಸ್ ಬಾಲ್ ನ ಶ್ರೇಷ್ಠ ತಂಡ ” ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್” ನ ಯಶಸ್ವಿ 12ನೇ ವರ್ಷದ ಸಂಭ್ರಮ ಪಿಪಿಲ್ 12 ವೆಂಕಟರಮಣ ತಂಡದ ಸದಸ್ಯರಿಗಾಗಿ ದಿ 27 ರಂದು ಉದ್ಯಾವರ ಗ್ರಾ ಪಂ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಂಡದ ಸದಸ್ಯರಿಗಾಗಿ ವಿದ್ಯಾರ್ಥಿ ವೇತನ ವಿತರಣೆ, ಉಚಿತ ಕಂಪ್ಯೂಟರ್ ತರಬೇತಿ ಪ್ರವೇಶ ಪತ್ರ ವಿತರಣೆ ,ವಿ.ಎಸ್.ಸಿ , ಪ್ರೌಡ್ ಮದರ್ಸ್ ಸನ್ಮಾನ ಕಾರ್ಯಕ್ರಮ, ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನಿ ಸದಸ್ಯರಿಗೆ ಜೀವ ರಕ್ಷಕ ಗೌರವ ಪ್ರಶಸ್ತಿ,”Stop drinking,start living” ,”Plant trees,Save Envoirmnt” ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು . ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ತಂಡದ ಮುಖ್ಯಸ್ಥರು ,ಸದಸ್ಯರು ಹಾಗೂ ಸ್ಪೋರ್ಟ್ಸಮೈಲ್ ನ ಮುಖ್ಯಸ್ಥ ಆರ್ ಕೆ ಆಚಾರ್ಯ ಉಪಸ್ಥಿತರಿದ್ದರು.