ಮುಂಬೈ: ಡ್ರಗ್ಸ್ ದಂಧೆಯ ನಂಟಿನ ಆರೋಪದಡಿ ನಟ ಸುಶಾಂತ್ ಸಿಂಗ್ ಅವರ ಮನೆಗೆಲಸದ ಸಹಾಯಕ ದೀಪೇಶ್ ಸಾವಂತ್ನನ್ನು ಮಾದಕವಸ್ತು ನಿಯಂತ್ರಣ ದಳದ (ಎನ್ಸಿಬಿ) ಅಧಿಕಾರಿಗಳು ಇಂದು ರಾತ್ರಿ ಬಂಧಿಸಿದ್ದಾರೆ.
ಮಾದಕವಸ್ತುಗಳ ಸೇವನೆ, ಸಂಗ್ರಹ ಮತ್ತು ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೀಪೇಶ್ ಸಾವಂತ್ ನ ಪಾತ್ರ ಇರುವ ಬಗ್ಗೆ ಆರೋಪ ಕೇಳಿಬಂದಿತ್ತು.
ಆ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದ ಎನ್ಸಿಬಿಯು ದೀಪೇಶ್ನ ಹೇಳಿಕೆ ಮತ್ತು ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಆತನನ್ನು ಬಂಧಿಸಿದೆ ಎಂದು ತಿಳಿದುಬಂದಿದೆ.