ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ 12 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಹೆಸರು ಬಹಿರಂಗವಾಗಿದೆ.
ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಆರೋಪಿಗಳು ಪಟ್ಟಿಯಲ್ಲಿ A1 ಶಿವ ಪ್ರಕಾಶ್, ಚಿಪ್ಪಿ A2 ರಾಗಿಣಿ ದ್ವಿವೇದಿ, A3 ವಿರೇನ್ ಖನ್ನಾ, A4 ಪ್ರಶಾಂತ್ ರಾಂಕಾ, A5 ವೈಭವ್ ಜೈನ್, A6 ಆದಿತ್ಯಾ ಆಳ್ವಾ, A7 ಲೂಮ್ ಪೆಪ್ಪರ್( ಡಕಾರ್) ಸೈಮನ್, A8 ಪ್ರಶಾಂತ್ ರಾಜು, A9 ಅಶ್ವಿನ್ ಅಲಿಯಾಸ್ ಬೂಗಿ, A10 ಅಭಿಸ್ವಾಮಿ, A11 ರಾಹುಲ್ ತೋನ್ಸೆ, A12 ವಿನಯ್. ರಾಗಿಣಿ ಆಪ್ತ ರವಿಶಂಕರ್ ಹೆಸರನ್ನು ಬಾಣಸವಾಡಿಯಿಂದ ಸಿಸಿಬಿಗೆ ವರ್ಗಾವಣೆಯಾದ ಮತ್ತೊಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
ನಗರದ ಪ್ರತಿಷ್ಠಿತ ಹೋಟೆಲ್ನಲ್ಲಿ ಒಟ್ಟಾಗುತ್ತಿದ್ದ ಈ ಆರೋಪಿಗಳು, ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಸಿನಿಮಾ ತಾರೆಯರು, ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.