ಉದ್ಯೋಗದ ದಾರಿ ತೋರಿಸ್ತಿದೆ, ನೂರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿ ಕೊಡ್ತಿದೆ “ಆ್ಯಂಬಿಟ್‍ ಆ್ಯನಿಮೇಶನ್ಸ್”

ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್, ಆನಿಮೇಶನ್ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ, ಕ್ರಿಯಾಶೀಲವಾಗಿ ಏನಾದರೂ ಮಾಡಬೇಕು ಎನ್ನುವವರಿಗೆ ಆ್ಯಂಬಿಟ್‍ ಆ್ಯನಿಮೇಶನ್ಸ್”ಸಂಸ್ಥೆ ಭರವಸೆಯ ಬಾಗಿಲು. ಯಾಕೆ ಅಂತೀರಾ? ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್,ಆನಿಮೇಶನ್ ಕ್ಷೇತ್ರದಲ್ಲಿ ಭರ್ಜರಿ ತರಬೇತಿ ನೀಡಿ ಉದ್ಯೋಗ ಕೊಡುವ ಸಂಸ್ಥೆಯಿದು. ಈಗಾಗಲೇ ನೂರಾರು ಮಂದಿಗೆ ಇಂತಹ ಕ್ರಿಯಾಶೀಲ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಟ್ಟ ಹೆಗ್ಗಳಿಕೆ ಈ ಸಂಸ್ಥೆಯದ್ದು.

ಕಲಿಕೆ ಎಂದರೆ ಬರೀ ಇಂಜಿನಿಯರಿಂಗ್, ಸಿಎ, ಬಿಕಾಂ ಮಾತ್ರವಲ್ಲ ಲಕ್ಷಾಂತರ ವೇತನ ನೀಡುವ ಆನಿಮೇಶನ್, ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲೂ ಉದ್ಯೋಗ ಧಾರಾಳ, ಅವಕಾಶಗಳು ಭರಪೂರ

‘ಆ್ಯಂಬಿಟ್‍ ಆ್ಯನಿಮೇಶನ್ಸ್” ಅನ್ನೋ ನನಸಿನ ತಾಣ:

ಮಂಗಳೂರು ಮತ್ತು ಉಡುಪಿಯಲ್ಲಿ Multimedia Training ಮುಂಚೂಣಿಯಲ್ಲಿರುವ ಹಾಗೂ ತನ್ನ ಹನ್ನೊಂದನೇ ವರ್ಷವನ್ನು ಪೂರೈಸಿರುವ  ಸಂಸ್ಥೆ ‘ಆ್ಯಂಬಿಟ್‍ ಆ್ಯನಿಮೇಶನ್ಸ್’.

3D Animation / Video Editing / Visual Effects Diploma ಮೊದಲಾದ  ಕೋರ್ಸುಗಳಿಗೆ ಇಲ್ಲಿ ಈಗಾಗಲೇ  ಅಡ್ಮಿಶನ್ ಪ್ರಾರಂಭವಾಗಿದ್ದು SSLC/ PUC/ Degree/ Diploma/ ITI   ಪಾಸ್ / ಫೈಲ್‍ ಆದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ.

 

ಕ್ರಿಯಾಶೀಲ,ಸೃಜನಶೀಲ ಮನಸ್ಸು ಮತ್ತು ಪ್ರತಿಭೆಯುಳ್ಳವರಿಗೆ ತಮ್ಮ ಕನಸುಗಳನ್ನು ನನಸುಮಾಡಿಕೊಳ್ಳುವ ನನಸಿನ ತಾಣವಿದು. ಪಕ್ವ ತರಬೇತಿ ನೀಡುವ ಮೂಲಕ ಇಲ್ಲಿ ವಿದ್ಯಾರ್ಥಿಗಳ ಆಸಕ್ತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ.

ಸೃಜನಶೀಲ ಬದುಕಿಗೊಂದು ಸ್ಪೂರ್ತಿ:

ಪ್ರಸ್ತುತ ಗ್ರಾಫಿಕ್, ಆನಿಮೇಶನ್ ರೀತಿಯ ಕ್ಷೇತ್ರಗಳಲ್ಲಿ ಅವಕಾಶ ಹೆಚ್ಚಲು ಮುಖ್ಯ ಕಾರಣ  Amazon/ Prime / Netflix / Youtube ಮೊದಲಾದ ಡಿಜಿಟೆಲ್ ಲೋಕ ವಿಸ್ತಾರವಾಗಿರುವುದು. ಡಿಜಿಟೆಲ್ ಕ್ಷೇತ್ರ ವೃದ್ದಿಯಾಗಲು ಸೃಜಲಶೀಲ ಮನಸ್ಸುಗಳ ಅಗತ್ಯತೆ ಇದೆ. ಆ ಮನಸ್ಸುಗಳನ್ನು, ಪ್ರತಿಭೆಗಳನ್ನು ಆ್ಯಂಬಿಟ್‍ ಆ್ಯನಿಮೇಶನ್ಸ್ ಸೃಷ್ಟಿಸುತ್ತಿರುವುದು ವಿಶೇಷ.

ಈಗಾಗಲೇ ಇಲ್ಲಿ ಕಲಿತ ವಿದ್ಯಾರ್ಥಿಗಳು ಟಿ.ವಿ. ಚಾನೆಲ್, ಸಿನೆಮಾ ಎಡಿಟರ್, ಆ್ಯನಿಮೇಟರ್ ಆಗಿ ಪ್ರಸಿದ್ಧರಾಗಿದ್ದು, ಉತ್ತಮ ಉದ್ಯೋಗ ಹಾಗೂ ಜನಪ್ರಿಯತೆಯನ್ನು ಕಂಡುಕೊಂಡಿದ್ದಾರೆ. ಇನ್ನೂ ವಿವಿಧ ಕ್ರಿಯಾಶೀಲ ಹುದ್ದೆಗಳಲ್ಲಿ ತೊಡಗಿಕೊಳ್ಳಲು ಸಂಸ್ಥೆ ಅವಕಾಶ ಕೊಡ್ತಿದೆ.

ವಿದ್ಯಾರ್ಥಿಗಳೇ ಇಲ್ಲಿ ಕೇಳಿ:

ನಿಮಗೆ ಕ್ರಿಯೇಟಿವ್ ವಿಡಿಯೋ ಎಡಿಟರ್, ಡಿಸೈನರ್, ಆನಿಮೇಟರ್ ಆಗಬೇಕು, ನಿಮ್ಮದೇ ಕಲ್ಪನೆಯ ವಂಡರ್ ಜಗತ್ತನ್ನು ಸೃಷ್ಟಿಸಬೇಕು ಎನ್ನುವ ಕನಸಿದ್ದರೆ ನೀವು ಆರಾಮಾಗಿ ಆ್ಯಂಬಿಟ್‍ ಆ್ಯನಿಮೇಶನ್ಸ್” ಸಂಸ್ಥೆಯನ್ನು ಸೇರಿ ನಿಮ್ಮ ಕನಸುಗಳನ್ನು ನನಸಾಗಿಸಬಹುದು.

ಹೆಚ್ಚಿನ ವಿವರಗಳಿಗೆ  ಸಂಪರ್ಕಿಸಿ
ಉಡುಪಿ: ಆ್ಯಂಬಿಟ್‍ ಆ್ಯನಿಮೇಶನ್ಸ್, ಎರಡನೇ ಮಹಡಿ, ರಾಜ್‍ಟವರ್ಸ್, ಸಿಟಿ ಬಸ್‍ಸ್ಟ್ಯಾಂಡ್‍ ಎದುರುಗಡೆ, ಉಡುಪಿ. ಫೋನ್: 0820 2525144 / 9901735144

ಮಂಗಳೂರು :ಆ್ಯಂಬಿಟ್‍ ಆ್ಯನಿಮೇಶನ್ಸ್, ಮೂರನೇಮಹಡಿ, ಪ್ಲಾಝಾಛೇಂಬರ್ಸ್, ಹೋಟೆಲ್‍ ರೂಪಾ ಎದುರುಗಡೆ, ಬಲ್ಮಠ ರೋಡ್, ಹಂಪನಕಟ್ಟೆ, ಮಂಗಳೂರು ಫೋನ್: 08242440389/ 9901735144

Email: [email protected]  Website: www.ambitanimations.com