ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ ಮೇಲ್ ಮೂಲಕ ದುಷ್ಕರ್ಮಿಗಳು ಬೆದರಿಕೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಮೇಲ್ ನಲ್ಲಿ ‘Kill Narendra Modi’ ಎಂಬ ಸಂದೇಶ ಕಳುಹಿಸಿ ಪ್ರಧಾನಿ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎನ್ನಲಾಗಿದೆ.
ಗೃಹ ಸಚಿವಾಲಯ ಈ ಬೆದರಿಕೆ ಇ ಮೇಲ್ ನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಧಾನಿ ಮೋದಿಗೆ ರಕ್ಷಣೆ ನೀಡುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಜತೆ ಚರ್ಚೆ ನಡೆಸಿದೆ.
ಇಂದು ಮುಂಜಾನೆ 3.15 ಸುಮಾರಿಗೆ ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್ ಸೈಟ್ ಹಾಗೂ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.