ಉಡುಪಿ: ಶುಕ್ರವಾರ ಮೃತಪಟ್ಟ ಬಿಜೆಪಿ ಯುವ ಮೋರ್ಚಾ ಉಡುಪಿ ನಗರ ಉಪಾಧ್ಯಕ್ಷನ ಪತ್ನಿ ಇಂದಿರಾನಗರ ನಿವಾಸಿ ರಕ್ಷಾ (26) ಅವರ ಸಾವಿನ ತನಿಖೆಗೆ ಸಂಬಂಧಿಸಿ ಡಿಎಚ್ಒ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಮಹಿಳೆಯ ಸಾವಿನ ತನಿಖೆಯನ್ನು ಸೂಕ್ತ ರೀತಿ ನಡೆಸಿ ನಾಲ್ಕು ದಿನಗಳೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.












