ಕಾರ್ಕಳ: ತಾಲೂಕು ಆಸ್ಪತ್ರೆಯ ಲ್ಲಿ ಹೊರಗುತ್ತಿಗೆ ನೌಕರರಿಗೆ ದುಡಿಯುತ್ತಿರುವ ಡಿ ಗುಂಪಿನ ಕಾರ್ಮಿಕರಿಗೆ ಕಳೆದ ಮೂರು ತಿಂಗಳುಗಳಿಂದ ಮಾಸಿಕ ವೇತನ ಪಾವತಿಯಾಗದೆ ವಿರುವುದರಿಂದ ಕರ್ತವ್ಯವನ್ನು ಮೊಟಕುಗೊಳಿಸಿದ್ದಾರೆ.
ಇದೆ ಆಸ್ಪತ್ರೆ ಯಲ್ಲಿ ಹತ್ತು ಮಂದಿ ಕಾರ್ಮಿಕರು ಉಡುಪಿ ಯ ಗುತ್ತಿಗೆದಾರರೊಬ್ಬರ ಸಂಸ್ಥೆ ಯಲ್ಲಿ ಡಿ ಗ್ರುಪ್ ನೌಕರರಾಗಿ ಕಳೆದ ಕೆಲವು ವರ್ಷ ಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. 2020 ಮೇ ಜೂನ್ ಜುಲೈ ತಿಂಗಳುಗಳ ವೇತನವು ಇವರ ಖಾತೆಗೆ ಇನ್ನೂ ಕೂಡ ಜಮೆಯಾಗಿಲ್ಲ. ಪರಿಣಾಮವಾಗಿ ಈ ಕಾರ್ಮಿಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಇದೆ ಕೆಲಸವನ್ನು ನಂಬಿಕೊಂಡು ಬಂದಿರುವ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗಾಗಿ ದೈನಂದಿನ ಆಹಾರ ಸಾಮಾಗ್ರಿಗಳನ್ನು ಸಾಲ ರೂಪದಲ್ಲಿ ಪಡೆದು ಸಾಲಗಾರರಾಗಿದ್ದಾರೆ. ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನೌಕರರು ಆಗ್ರಹಿಸಿದ್ದಾರೆ