ಉಡುಪಿ: ಏಂಜಲ್ಸ್ ಫೌಂಡೇಶನ್ ಕಲ್ಯಾಣಪುರ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ ಇವರ ಜಂಟಿ ಸಹಭಾಗಿತ್ವದಲ್ಲಿ ಈ ಬಾರಿ 10ನೇ ತರಗತಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ತೋರಿದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ಸ್ಥಾನಿ ಹರ್ಷಿತ್ ರಾಜು (ಶೇ. 98.24), ದ್ವಿತೀಯ ಸ್ಥಾನಿ ಅನನ್ಯ ಕೆ. (ಶೇ. 98.08) ಹಾಗೂ ತೃತೀಯ ಸ್ಥಾನಿ ಐಶ್ವರ್ಯ ಎ.ಜಿ. (ಶೇ. 97.60) ಇವರನ್ನು ಸನ್ಮಾನಿಸಲಾಯಿತು.
ಏಂಜಲ್ಸ್ ಫೌಂಡೇಶನ್ ನ ಸ್ಥಾಪಕ ಹಾಗೂ ಅಧ್ಯಕ್ಷ ರೋಬರ್ಟ್ ಡಿಸೋಜ ಇವರು ಫೌಂಡೇಶನ್ ನ ಧ್ಯೇಯೋದ್ದೇಶಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸನ್ಮಾನಿತರ ಹಾಗೂ ಅವರ ಸಾಧನೆಯ ಕಿರು ಪರಿಚಯವಿತ್ತರು.
ಪ್ರಸ್ತುತ ವರ್ಷ ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದ್ದಕ್ಕಾಗಿ ಶಾಲಾ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಬಿ.ಎಸ್. ಇವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಹೆ, ಮಣಿಪಾಲ ಇಲ್ಲಿನ ಪ್ರಾಧ್ಯಾಪಕರಾದ ಪ್ರಶಾಂತ್ ಶೆಟ್ಟಿ ನರ್ನಾಡು,ಲಯನ್ಸ್ ಕ್ಲಬ್ ಕಲ್ಯಾಣಪುರದ ಅಧ್ಯಕ್ಷ ರೊನಾಲ್ಡ್ ಸುವಾರಿಸ್, ಲಯನ್ಸ್ ಕ್ಲಬ್ ಕಲ್ಯಾಣಪುರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು. ಏಂಜಲ್ಸ್ ಫೌಂಡೇಶನ್ ನ ಕಾರ್ಯದರ್ಶಿ ಎವ್ಜಿನ್ ರೆಬೆಲ್ಲೋ ವಂದಿಸಿದರು. ಈ ಸಂದರ್ಭ ಶಾಲಾ ಶಿಕ್ಷಕಿಯರಾದ ಶೀಲಾ ಮೆನೆಜಸ್, ಅನುಷ ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.