ಮಲೆಕುಡಿಯ ಸಂಘ ಹೆಬ್ರಿ: ತಾಲೂಕು ಸಮಿತಿ ಅಧ್ಯಕ್ಷರಾಗಿ ಸತೀಶ ಗೌಡ ಪಾರಿಕಲ್ಲು ಆಯ್ಕೆ

ಉಡುಪಿ: ಜಿಲ್ಲಾ ಮಲೆಕುಡಿಯ ಸಂಘ ಹೆಬ್ರಿ ಇದರ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಸತೀಶ ಗೌಡ ಪಾರಿಕಲ್ಲು ಹಾಗೂ ಪ್ರಧಾನ ಕಾರ್ಯದರ್ಶಿ ಹರೀಶ್ ಅಂಡಾರು ಅವರು ಆಯ್ಕೆಯಾಗಿದ್ದಾರೆ.

ಹಿರಿಯಡಕದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾಧ್ಯಕ್ಷ ಮಂಜಪ್ಪ ಗೌಡ ಅವರ ಉಪಸ್ಥಿತಿಯಲ್ಲಿ ಹೊಸ ಸಮಿತಿಯನ್ನು ರಚನೆ ಮಾಡಲಾಯಿತು.

ಇತರ ಪದಾಧಿಕಾರಿಗಳು: ಸಮಿತಿಯ ಉಪಾಧ್ಯಕ್ಷ- ಶೇಖರ ನಾಡ್ಪಾಲು, ಜಂಟಿ ಕಾರ್ಯದರ್ಶಿ- ಹೃದಯ ಬಲ್ಲಾಡಿ ಕೋಶಾಧಿಕಾರಿ- ಗೀತಾ ಮತ್ತಾವು,  ಸಂಘಟನಾ ಕಾರ್ಯದರ್ಶಿ- ಅಶೋಕ ಕಬ್ಬಿನಾಲೆ ಮತ್ತು ಸಂದೀಪ್ ಅಂಡಾರು ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಲೆಕ್ಕ ಪತ್ರದ ಕಡತಗಳನ್ನು ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು, ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಗಂಗಾಧರ ಗೌಡ ಈದು, ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲೂಕು ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮ ಸಮಿತಿಯ  ಪದಾಧಿಕಾರಿಗಳು ಉಪಸ್ಥಿತರಿದ್ದರು.