ಕಾರ್ಕಳ: ಕಾರ್ಕಳ ತಾಲ್ಲೂಕಿನಲ್ಲಿ ಮಿಯಾರಿನ ಮೊರಾರ್ಜಿ ಸರ್ಕಾರಿ ಪ್ರೌಢಶಾಲೆ ಸಹಿತ 9 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.
ಸರ್ಕಾರಿ ಶಾಲೆ:
ಮಿಯಾರಿನ ಮೊರಾರ್ಜಿ ಸರ್ಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶ ದಾಖಲಿಸಿದೆ.
ಅನುದಾನಿತ ಪ್ರೌಢಶಾಲೆ:
ಕಾರ್ಕಳ ಭುವನೇಂದ್ರ ಕನ್ನಡ ಮಾಧ್ಯಮ ಪ್ರೌಢಶಾಲೆ, ನಿಟ್ಟೆ ಎನ್ಎಸ್ಎಎಂ ಅನುದಾನಿತ ಪ್ರೌಢಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ.
ಅನುದಾನರಹಿತ ಪ್ರೌಢಶಾಲೆ:
ಗಣಿತನಗರದ ಜ್ಞಾನಸುಧಾ ಪ್ರೌಢಶಾಲೆ, ಹಿರ್ಗಾನದ ಸಂತ ಮರಿಯ ಗೊರೆಟ್ಟಿ ಪ್ರೌಢಶಾಲೆ, ಕಾರ್ಕಳ ಎಸ್ ವಿಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಅಜೆಕಾರು ಚರ್ಚ್ ಪ್ರೌಢಶಾಲೆ, ಸಚ್ಚೇರಿಪೇಟೆ ಲಯನ್ಸ್ ಪ್ರೌಢಶಾಲೆ ಹಾಗೂ ಬಜಗೋಳಿಯ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಶೇ. 100 ಫಲಿತಾಂಶ ದಾಖಲಿಸಿವೆ.