ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ  ಅರ್ಜಿ ಆಹ್ವಾನ

ಉಡುಪಿ: ಪ್ರಸ್ತಕ ಸಾಲಿನ ಸರ್ಕಾರಿ ಹಾಗೂ ಅನುದಾನಿತ  ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೇ 35 ರಷ್ಟು ಅಂಕ ಪಡೆದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಥಮ ಡಿಪ್ಲೋಮಾ ಪ್ರವೇಶ ಮಾಡುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಅಥವಾ ಸಮೀಪ ಇರುವ   ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ “ಸಹಾಯಕೇಂದ್ರ’’ ದಲ್ಲಿ ಪ್ರಾಂಶುಪಾಲರ, ಬೋಧಕ ಸಿಬ್ಬಂದಿಯವರ ನೇತೃತ್ವದಲ್ಲಿ ಆನ್ ಲೈನ್ ನಾನ್-ಇಂಟರಾಕ್ಟೀವ್  ಕೌನ್ಸಿಲಿಂಗ್ ಮೂಲಕ ಆಗಸ್ಟ್ 6 ರಿಂದ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಅರ್ಜಿಯನ್ನು https://dtetech.karnataka.gov.in/kartechnical ಮತ್ತು www.cetonline.karnataka.gov.in/kea ವೆಬ್ ಸೈಟ್ ಮೂಲಕ ಸಲ್ಲಿಸಬಹುದು. ಆಗಸ್ಟ್ 22 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಉಡುಪಿ ಸಂಸ್ಥೆಯ ಪ್ರಾಚಾರ್ಯರನ್ನು (ದೂರವಾಣಿ ಸಂಖ್ಯೆ: 0820-2570244) ಸಂಪರ್ಕಿಸಬಹುದಾಗಿದೆ.