ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದ ವಿವೊ ಕಂಪೆನಿ

ನವದೆಹಲಿ: ಭಾರತ ಮತ್ತು ಚೀನಾದ ಗಡಿ ಸಂಘರ್ಷದ ಬೆಳವಣಿಗೆ ಇದೀಗ ಐಪಿಎಲ್ ಮೇಲೂ ಪರಿಣಾಮ ಬೀರಿದೆ. ಚೀನಾ ಮೂಲದ ಮೊಬೈಲ್‌ ತಯಾರಿಕ ಕಂಪನಿ ವಿವೊ ಐಪಿಎಲ್‌ ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿವೊ ಕಂಪನಿಯನ್ನು ಐಪಿಎಲ್‌ ಪ್ರಾಯೋಜಕತ್ವದಲ್ಲಿ ಮುಂದುವರಿಸಿದ ಐಪಿಎಲ್‌ ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ಮಂಗಳವಾರ ದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದವು. ವಿವೊ ಪಾಯೋಜಕತ್ವದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಗಡಿ ಸಂಘರ್ಷದ ಬಳಿಕ ಭಾರತವು ಚೀನಾ ಮೂಲದ ಹಲವು ಆ್ಯಪ್‌ಗಳನ್ನು ನಿಷೇಧಿಸಿದೆ. ಅದೇ ರೀತಿ ಚೀನಾ ಮೂಲದ ವಿವೊ ಕಂಪನಿ ಐಪಿಎಲ್‌ ಪ್ರಯೋಜಕತ್ವ ಪಡೆದಿರುವುದರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದ ಐಪಿಎಲ್ ಆಡಳಿತ ಮಂಡಳಿ ಆ.1ರ ಸಭೆಯಲ್ಲಿ ಪ್ರಾಯೋಜಕತ್ವ ಮುಂದುವರಿಸುವ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬೆಳೆವಣಿಗೆಯ ಮಧ್ಯೆ ಇದೀಗ ವಿವೊ ಪ್ರಾಯೋಜಕತ್ವದಿಂದ ಹೊರಬರುವ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ.