ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನ : ಮುಖ್ಯಮಂತ್ರಿಗೆ ಸಚಿವ ಕೋಟ ಪತ್ರ

ಉಡುಪಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ವೇಳೆಗೆ ಸುಸಜ್ಜಿತ ಕರ್ನಾಟಕ ಯಾತ್ರಿ ಭವನ ನಿರ್ಮಾಣವಾಗಬೇಕೆಂಬ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳ ಮನವಿಯನ್ನು ಪುರಸ್ಕರಿಸಿ, ರಾಮಮಂದಿರ ನಿವೇಶನದ ಆಸುಪಾಸಿನಲ್ಲಿ ಕನಿಷ್ಠ 3ರಿಂದ 5 ಎಕರೆ ನಿವೇಶನವನ್ನು ಒದಗಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿಗಳಲ್ಲಿ ನಿವೇದಿಸಿಕೊಳ್ಳುವಂತೆ ಕೋರಿ‌ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರದ ಮೂಲಕ‌ ಮನವಿ ಮಾಡಿಕೊಂಡಿದ್ದಾರೆ.