ಗೂಗಲ್ ಉದ್ಯೋಗಿಗಳಿಗೆ 2021ರ ಜೂನ್ ತಿಂಗಳವರೆಗೂ ವರ್ಕ್ ಫ್ರಂ ಹೋಮ್

ನವದೆಹಲಿ: ಜಗತ್ತಿನಲ್ಲಿ ದಿನೇ ದಿನೇ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಳವಾಗುತ್ತಿದ್ದು, ಹಲವಾರು ಐಟಿ ಉದ್ಯಮ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸಲು ಸೂಚಿಸಿದೆ. ಅದರಂತೆ ಗೂಗಲ್ ತನ್ನ ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ 2021ರ ಜೂನ್ 30ರ ವರೆಗೂ ವರ್ಕ್ ಫ್ರಂ ಹೋಮ್ ಅವಧಿಯನ್ನು ವಿಸ್ತರಿಸಿದೆ.
ಉದ್ಯೋಗಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಿರುವ ಗೂಗಲ್ ಸಿಇಒ ಸುಂದರ್ ಪಿಚೈ, ಉದ್ಯೋಗಿಗಳಿಗೆ ಮುಂದೆ ಯೋಜಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಕಚೇರಿಯಲ್ಲಿ ಅಗತ್ಯವಿರುವ ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಿದ್ದು, ನಮ್ಮ ಜಾಗತಿಕ ಸ್ವಯಂಪ್ರೇರಿತ ಕೆಲಸವನ್ನು ಮನೆಯಲ್ಲಿ ಮಾಡಲು 2021ರ ಜೂನ್ 30ರ ವರೆಗೆ ವಿಸ್ತರಿಸುತ್ತಿದ್ದೇವೆ ಎಂದು ಮೇಲ್ ನಲ್ಲಿ ತಿಳಿಸಿದ್ದಾರೆ.
ಅಮೆಜಾನ್ ಮತ್ತು ಆಪಲ್ ತಮ್ಮ ಉದ್ಯೋಗಿಗಳು ಜನವರಿಯಲ್ಲಿ ತಮ್ಮ ಕಚೇರಿಗಳಿಗೆ ಮರಳಬೇಕೆಂದು ಸೂಚಿಸಿದೆ.