ದ.ಕ.ಜಿಲ್ಲೆ ಸಂಪೂರ್ಣ ಲಾಕ್ ಡೌನ್: ಔಷದಿ, ಆಸ್ಪತ್ರೆಗೆ ಮಾತ್ರ ಅವಕಾಶ

ಮಂಗಳೂರು: ನಾಳೆ ರಾಜ್ಯಾದ್ಯಂತ ‘ಸಂಡೇ ಲಾಕ್ ಡೌನ್’ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆ ಕೂಡ ಸಂಪೂರ್ಣ ಲಾಕ್ ಡೌನ್ ಆಗಲಿದೆ.
ದಿನವಿಡೀ ಲಾಕ್ ಆಗಲಿದ್ದು, ನಾಳೆ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ. ಅಲ್ಲದೇ ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಆಗಲಿದೆ.
ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶವಿರುವುದಿಲ್ಲ. ಹಾಲು, ಔಷಧಿ, ಆಸ್ಪತ್ರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇಂದು ರಾತ್ರಿ‌ 9ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಸಂಪೂರ್ಣ ಲಾಕ್ ಆಗಲಿದೆ.
ಪ್ರತಿ ದಿನ ರಾತ್ರಿ 9 ರಿಂದ ಬೆಳಗ್ಗೆ 5ರ ವರೆಗೂ ನೈಟ್ ಕರ್ಫ್ಯೂ ಜಾರಿಯಿರಲಿದೆ.
ಸಂಡೇ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಜುಲಾಯಿ 31ರವರೆಗೆ ಅನ್ವಯ ಇರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.