ಉಡುಪಿ ನ್ಯಾಯಾಧೀಶರಿಗೆ ಕೊರೊನಾ ಪಾಸಿಟಿವ್: ನ್ಯಾಯಾಲಯ ಸಂಕೀರ್ಣ ಸೀಲ್ ಡೌನ್

ಉಡುಪಿ: ಉಡುಪಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂಕೀರ್ಣವನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ನ್ಯಾಯಾಲಯದ ಗೇಟ್ ಗಳನ್ನು ಬಂದ್ ಮಾಡಿದ್ದು, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಜು.21 ಮತ್ತು 22ರಂದು ಇಡೀ ನ್ಯಾಯಾಲಯವನ್ನು ಸ್ಯಾನಿಟೈಸ್ ಮಾಡಿಲಿದ್ದು, ಜು.23ರಿಂದ ಮತ್ತೆ ಎಂದಿನಂತೆ ನ್ಯಾಯಾಲಯ ಸಂಕೀರ್ಣ ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾ ಮುಖ್ಯ ನ್ಯಾಯಾಧೀಶರ ಪ್ರಕಟನೆ ತಿಳಿಸಿದೆ.