ಉಡುಪಿ: ಜಿಲ್ಲೆಯಲ್ಲಿ ಜುಲೈ 16ರ ಗುರುವಾರ ಬೆಳಿಗ್ಗೆಯಿಂದ 14 ದಿನಗಳ ಕಾಲ ಸೀಲ್ ಡೌನ್ ಇರುವುದರಿಂದ ಬಸ್ ಸಂಚಾರ ಇಲ್ಲದೆ ಸರಕಾರಿ ನೌಕರರಿಗೆ ಕಚೇರಿಗೆ ಬರಲು ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಅವರು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಲ್ಲಿ ಸಾರಿಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು.
ಅದರಂತೆ ಬೈಂದೂರು – ಕುಂದಾಪುರ – ರಜತಾದ್ರಿ ಹಾಗೂ ಹೆಜಮಾಡಿ – ಕಾಪು – ಉಡುಪಿ – ರಜತಾದ್ರಿ ಮಾರ್ಗವಾಗಿ ಸರಕಾರಿ ಬಸ್ ಸೌಲಭ್ಯ ಒದಗಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಬಸ್ ಗಳು ಬೆಳಿಗ್ಗೆ 8 ಗಂಟೆಗೆ ಡಿಪೋದಿಂದ ಹೋರಾಡಲಿವೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಹೇಳಿದ್ದಾರೆ