ಚೈನಾ ಮೊಬೈಲ್ ಕಂಪೆನಿ ಸಹವಾಸ ಬೇಡ ಎನ್ನುವವರಿಗೆ ಇಲ್ಲಿದೆ ಹತ್ತು ಆಯ್ಕೆಗಳು: ಹೊಸ ಮೊಬೈಲ್ ಕೊಳ್ಳುವವರು ಗಮನಿಸಿ

ಹೊಸ ಮೊಬೈಲ್ ತಗೊಳ್ಬೇಕು ಆದ್ರೆ ಯಾವ ಕಂಪೆನಿದ್ದು ತಗೊಳ್ಳಲಿ? ಕಡಿಮೆ ಬೆಲೆಯಲ್ಲಿ ಒಳ್ಳೆ ಮೊಬೈಲ್ ಬೇಕು. ಆದ್ರೆ ಚೈನಾ ಕಂಪೆನಿಗಳ ಸಹವಾಸ ಬೇಡ ಮಾರಾರ್ರೆ ಎನ್ನುತ್ತೀರಾ? ಹಾಗಾಧ್ರೆ ಇಲ್ಲಿ ಕೇಳಿ. ಮಾರುಕಟ್ಟೆಯಲ್ಲಿ ಈಗ ಪ್ರಾಬಲ್ಯ ಮೆರೆಯುತ್ತಿರುವ ಕಂಪೆನಿಗಳ ಪೈಕಿ ಬಹುತೇಕ ಮೊಬೈಲ್ ಗಳು ಚೈನಾ ಕಂಪೆನಿಗಳದ್ದೇ ಆಗಿದೆ.

ಮೊಬೈಲ್ ಗೆ ಬಳಸುವ ಬ್ಯಾಟರಿ, ಬಟನ್ ,ಚಾರ್ಜರ್ ಮೊದಲಾದ ಎಲ್ಲಾ ವಸ್ತುಗಳು ಚೈನಾದ್ದೇ ಆಗಿದೆ. ಹಾಗಾಗಿ ಇವುಗಳಿಗೆ ಪರ್ಯಾಯ ಭಾರತದಲ್ಲಿ ನಿರ್ಮಾಣವಾಗುವವರೆಗೂ ಕೆಲವೊಂದು ಬಿಡಿಭಾಗಗಳಿಗೆ ಚೈನಾದ ಮೇಲೆ ಅವಲಂಬಿತರಾಗುವುದು ಅನಿವಾರ್ಯ. ಆದರೆ ಚೈನಾ ಹೊರತುಪಡಿಸಿ ಇತರ ಕಂಪೆನಿಗಳ ಮೊಬೈಲ್ ಅನ್ನು ಖರೀದಿಸುತ್ತೇವೆ ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ ಇಲ್ಲಿ ಕೆಲವೊಂದು ಕಂಪೆನಿಗಳ ಮಾಹಿತಿ ನೀಡುತ್ತೇವೆ ಗಮನಿಸಿ.

♦ನೋಕಿಯಾ:

ನೋಕಿಯಾ,ಎಚ್‌ಎಂಡಿ ಗ್ಲೋಬಲ್ ಒಡೆತನದ  ಫಿನ್ಲೆಂಡ್ ಮೂಲದ ಸಂಸ್ಥೆ. ತನ್ನ ಹೊಸ ಹೊಸ ಫೀಚರ್ ಫೋನ್ ಗಳನ್ನು ಇದೀಗ ನೋಕಿಯಾ ಜಾಗತಿಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಕೆಲವೊಂದು ಹೊಸ ಫೀಚರ್ ಗಳನ್ನು ನೋಕಿಯದಲ್ಲಿ ಕಾಣಬಹುದು. ಇದು ಅಧಿಕ ಬಾಳಿಕೆ ಬರುವ ಮೊಬೈಲ್ ಫೋನ್ ಗಳಲ್ಲೊಂದು.

ಲಾವಾ:

ಲಾವಾ, ಭಾರತೀಯ ಮೂಲದ ಕಂಪನಿ. ಅತ್ಯಂತ ಕಡಿಮೆ ಕ್ರಯಕ್ಕೆ ಒಳ್ಳೆಯ ಫೋನ್ ಗಳನ್ನು ನೀಡುತ್ತಿರುವ ಈ ಸಂಸ್ಥೆ ಪ್ರಸ್ತುತ ಹೊಸ ಫೀಚರ್ ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಲಾವಾ ಹೊಸ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಈ ಫೋನ್ ಅನ್ನು ಖರೀದಿಸಬಹುದು.

♦Asus:(ಆಸಸ್)

asus ತೈವಾನ್ ಮೂಲದ ಕಂಪನಿ. ಇದು ತನ್ನ ಮೊಬೈಲ್ ಫೋನ್ ಗಳನ್ನು ಇಂಡೋನೇಶ್ಯಾದಲ್ಲಿ ತಯಾರಿಸುತ್ತಿದೆ. ಆಸಸ್ ನ ಝೆನ್ ಫೋನ್ ಸೀರಿಸ್ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ದೀರ್ಘ ಬಾಳಿಕೆ ಬರುವ ಅತ್ಯಂತ ಗಟ್ಟಿ ಮೊಬೈಲ್ ಇದು ಅನ್ನೋ ಹೆಗ್ಗಳಿಕೆ ಗಳಿಸಿದೆ. ಆಸಸ್ ರೋಗ್ ಫೋನ್ ಗೇಮ್ ಆಡುವವರ ಹಾಟ್ ಫೆವರೇಟ್ ಸೆಟ್.

♦ಸ್ಯಾಮ್ ಸಂಗ್

ಇದು  ಕೊರಿಯಾ ಮೂಲದ ಕಂಪೆನಿ. ಸ್ಯಾಮ್ ಸಂಗ್ ನ ಎಲ್ಲಾ ಮೊಬೈಲ್ ಗಳು ಚೀನಾ ಕಂಪೆನಿಗಳಿಗೆ ಪೈಪೋಟಿ ನೀಡುತ್ತಿದೆ.ಸ್ವಲ್ಪ ದುಬಾರಿ ಎನ್ನುವುದನ್ನು ಬಿಟ್ಟರೆ ಸ್ಯಾಮ್ ಸಂಗ್ ಒಳ್ಳೆಯ ಫೋನ್.

♦ಸೋನಿ:

ಸೋನಿ ಜಪಾನ್ ಮೂಲದ ಕಂಪನಿಯಾಗಿದೆ. ಸೋನಿ ಎಕ್ಸ್‌ಪೆರಿಯಾ ಫೋನ್ ಜನಪ್ರಿಯವಾಗಿದೆ. ತನ್ನ ಚೆಂದದ ಡಿಸೈನ್ಗಳಿಂದ ಸೋನಿ ಫೋನ್ ಗಳು ಗಮನ ಸೆಳೆಯುತ್ತಿದೆ. ಬಾಳಿಕೆಯೂ ಚೆನ್ನಾಗಿದೆ.

♦ಎಲ್ ಜಿ:

ಎಲ್‌ಜಿ ಕೊರಿಯಾದ ಕಂಪನಿ. ಸ್ಟೈಲಿಶ್ ಫೋನ್ ಗಳನ್ನು ಮಾರುಕಟ್ಟೆಗೆ ಎಲ್ ಜಿ ಬಿಟ್ಟಿದೆ. ಒಳ್ಳೆಯ ಬ್ಯಾಟರಿ ಮತ್ತು ಡಿಸೈನ್ ಮತ್ತು ಫೀಚರ್ ಗಳು ಎಲ್ ಜಿಯಲ್ಲಿದೆ.

♦ಪ್ಯಾನಸೋನಿಕ್:

ಇದು ಮೂಲತಃ ಜಪಾನ್‌ನ ಕಂಪನಿ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರೋ ಎಲೆಕ್ಟ್ರಾನಿಕ್ ಸಂಸ್ಥೆ. ಪ್ಯಾನಸೋನಿಕ್ ಫೋನ್ ಗಳು ಅಷ್ಟು ಜನಪ್ರಿಯವಲ್ಲದಿದ್ದರೂ ಕೊಂಡುಕೊಂಡರೆ ಹಣ ಹಾಳಂತೂ ಆಗುವುದಿಲ್ಲ.

♦ಮೈಕ್ರೋಮ್ಯಾಕ್ಸ್:

ಇದು ಭಾರತೀಯ ಕಂಪೆನಿ ಮೈಕ್ರೋಮ್ಯಾಕ್ಸ್, ಕಡಿಮೆ ದರಕ್ಕೆ ಹೆಚ್ಚಿನ ಫೀಚರ್‌ಗಳನ್ನು ನೀಡುತ್ತಿದೆ.ಸರ್ವಿಸ್ ಮತ್ತು ಆವಿಷ್ಕಾರದಲ್ಲಿ ಈ ಕಂಪೆನಿ ತುಸು ಹಿಂದಕ್ಕಿದ್ದರೂ ಇದೀಗ ಸುಧಾರಿಸಿಕೊಂಡಿದೆ.

♦ಕ್ಸೋಲೋ:

ಇದು ಭಾರತೀಯ ಕಂಪೆನಿ. ನೋಯ್ಡಾದಲ್ಲಿ ಕಚೇರಿ ಹೊಂದಿದೆ. ಬೇಸಿಕ್ ಫೋನ್ ಸೇರಿಸದಂತೆ ವಿವಿಧ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಈ ಕಂಪೆನಿ ಮುನ್ನುಗ್ಗುತ್ತಿದೆ.

♦ಪಿಕ್ಸೆಲ್:

ಇದು ಗೂಗಲ್ ಸಂಸ್ಥೆಯ ಮೊಬೈಲ್ ಫೋನ್.ಇದು ಅಷ್ಟೊಂದು ಜನಪ್ರಿಯವಲ್ಲದಿದ್ದರೂ ಶುದ್ದ ಕ್ಯಾಮರಾ,ಸಿಸ್ಟಮ್ ಮತ್ತು ಸಾಫ್ಟ್ ವೇರ್ ನೀಡುವಲ್ಲಿ ಗಮನ ಸೆಳೆದ ಸಂಸ್ಥೆ