ಉಡುಪಿ: ಅಪರಿಚಿತ ವ್ಯಕ್ತಿ ಸಾವು, ಪತ್ತೆಗೆ ಸೂಚನೆ

ಉಡುಪಿ: ಇಲ್ಲಿನ ಆದಿ ಉಡುಪಿ ಬಸ್ ನಿಲ್ದಾಣದಲ್ಲಿ ಬುಧವಾರ ಅಸ್ವಸ್ಥರಾಗಿ ಬಿದಿದ್ದ 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಪರೀಕ್ಷಿಸಿದಾಗ ಆತ ಮೃತಪಟ್ಟಿರುವುದು ದೃಢಪಟ್ಟಿದೆ.
ಮೃತನ ವಾರಸುದಾರರು ಇದ್ದಲ್ಲಿ ತುರ್ತಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಆಸ್ಪತ್ರೆಗೆ ಸಾಗಿಸಲು ಗ್ರಹರಕ್ಷಕ ದಳದ ಸಿಬ್ಬಂದಿ ವನಿತಾ, ನಗರದ ತ್ಯಾಜ್ಯ ವಿಲೇವಾರಿ ಉಸ್ತುವಾರಿ ವನಜಾ ಹಾಗೂ ಶೇಖರ್ ಕೊಟ್ಯಾನ್ ಪಡುಕೆರೆ ಧೈರ್ಯದಿಂದ ನೆರವಿಗೆ ಬಂದರೆಂದು ನಿತ್ಯಾನಂದ ಒಳಕಾಡು ಅವರು ತಿಳಿಸಿದ್ದಾರೆ.