ಉಡುಪಿ: ಉಡುಪಿ ಜಿಲ್ಲಾ ಬಿಜೆಪಿಯು ಯುವ ಮೋರ್ಚಾದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿದೆ.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಕಾರ್ಕಳ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಶಿಫಾರಸ್ಸಿನ ಮೇರೆಗೆ ಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆಗೊಳಿಸಿದ್ದಾರೆ.
ಪದಾಧಿಕಾರಿಗಳ ವಿವರ: ಉಪಾಧ್ಯಕ್ಷ- ವಿನೋದ್ರಾಜ್ ಪೂಜಾರಿ ಕುಂದಾಪುರ, ಸುಮಿತ್ ಮಡಿವಾಳ ಕಾರ್ಕಳ, ಸಚಿನ್ ಬೊಳ್ಜೆ ಉದ್ಯಾವರ, ಪ್ರಧಾನ ಕಾರ್ಯದರ್ಶಿ- ಶರತ್ ಉಪ್ಪುಂದ, ಅಕ್ಷಿತ್ ಹೆರ್ಗ, ಕಾರ್ಯದರ್ಶಿ- ಮಹೇಶ್ ಹಟ್ಟಿಕುದ್ರು, ಪ್ರವೀಣ್ ಪೂಜಾರಿ ಕಾಪು, ನವೀನ್ ತಿಂಗಳಾಯ ಉಡುಪಿ, ಕೋಶಾಧಿಕಾರಿ- ಯತೀಶ್ ಕೋಟ್ಯಾನ್ ಉಡುಪಿ ನೇಮಕಗೊಂಡಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಭಿರಾಜ್ ಸುವರ್ಣ, ರಾಘವೇಂದ್ರ ರಾವ್, ರಂಜನ್ ಶೆಟ್ಟಿ, ಗುರುರಾಜ್ ಭಂಡಾರಿ, ಅವಿನಾಶ್ ಶೆಟ್ಟಿ, ಸಂದೇಶ್ ಸೇರಿಗಾರ್, ಉದಯ ಬಂಗೇರಾ, ಮಹೇಂದ್ರ ಶೆಟ್ಟಿ ಶಿರಿಯಾರ, ನವೀನ್ ಕಾಂಚನ್, ಮಂಜುನಾಥ ದೇವಾಡಿಗ, ವಿಜೇತ್ ಬೆಳ್ಳರ್ಪಾಡಿ, ಆಶಿತ್ ಶೆಟ್ಟಿಗಾರ್, ದೀಪಕ್ ಶೇಟ್, ಸದಾ ಕೊಕ್ಕರ್ಣೆ, ಸಚಿನ್ ಕುಂದರ್, ಕಿರಣ್ ಕುಮಾರ್ ಕಕ್ಕುಜೆ ಆಯ್ಕೆಯಾಗಿದ್ದಾರೆ.