ಉಡುಪಿ ಜುಲೈ 1: ಕೋರೊನಾ ಹೋರಾಟ ಎಂಬುದು ನಿರಂತರ ಹೋರಾಟ, ಎಲ್ಲಿಯ ತನಕ ಕೊರೊನಾ ಇರುತ್ತದೆಯೋ ಅಲ್ಲಿಯ ತನಕ ನಾವು ಹೋರಾಟ ಮಾಡಲೇಬೇಕು ಇಂದು ನಾವು ಕೊರೋನಾ ಹೊರಾಟದ ಪ್ರಾರಂಭದ ಹಂತದಲ್ಲಿ ನಾವಿದ್ದೇವೆ. ಆದ್ದರಿಂದ ಕೊರೊನಾ ವಿರುದ್ದ ನಾವು ಸಮರ ಸಾರಲೇಬೇಕು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.
ಅವರು ಬುಧವಾರ ಐಎಂಎ ಭವನದಲ್ಲಿ ಭಾರತೀಯ ವೈಧ್ಯಕೀಯ ಸಂಘ, ಉಡುಪಿ ಕರಾವಳಿ ಶಾಖೆಯ ವತಿಯಿಂದ ನಡೆದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.
ಇದು ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡುವ ಸಮಯವಲ್ಲ,ಕೋರೋನಾ ಹೋರಾಟ ಎಂಬುದು ಯಾವಾಗ ಕೊನೆಯಾಗುತ್ತೋ ಅಂದು ಕೊರೋನಾ ವಾರಿಯರ್ಸ್ ಗಳಿಗೆ ಜಿಲ್ಲಾಡಳಿತದಿಂದ ಸನ್ಮಾನ ಮಾಡುವ ಉದ್ದೇಶ ಇದೆ ಎಂದರು.
ಕೊರೊನಾ ಹೋರಾಟದಲ್ಲಿ ಎಲ್ಲ ವೈದ್ಯರ ಸಹಕಾರ ಬೇಕಿದೆ. ಡಾ ಶಶಿಕರಣ್ ಅವರು ಕೊರೋನಾ ವಾರಿಯರ್ಸ್ ಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಯಾವುದೇ ಕಾರಣಕ್ಕೂ ಕೊರೋನ ವೈರಸ್ ಗೆ ಸಿಗದೆ ಆ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ಈಡಿ ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸಮುದಾಯಕ್ಕೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಉಡುಪಿ ಜಿಲ್ಲೆ ರಾಜ್ಯಕ್ಕೆ ಎಲ್ಲಾ ವಿಭಾಗದಲ್ಲಿ ಮಾದರಿ ಜಿಲ್ಲೆಯಾಗಿರುವುದರಿಂದ, ಕರೋನಾ ಹೋರಾಟದಲ್ಲು ಮಾದರಿಯಾಗಬೇಕು ಎಂದು ಆಶಯ ವ್ಯಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಉಡುಪಿಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ವಾಸುದೇವ ಸೋಮಾಯಾಜಿ ಹಾಗೂ ಕಟಪಾಡಿಯ ಡಾ. ಶ್ರೀನಿವಾಶ ರಾವ್ ಕೊರಡ್ಕಲ್ ಇವರನ್ನು ಸನ್ಮಾನಿಸಲಾಯಿತು.
ಐ.ಎಂಎ ರಾಜ್ಯ ಘಟಕದ ಡಾ.ಬಿ.ಸಿ.ರಾಯ್ ಪ್ರಶಸ್ತಿ ವಿಜೇತ ಡಾ.ಪ್ರಭಾಕರ ಶೆಟ್ಟಿ ಇವರನ್ನು ಗೌರವಿಸಲಾಯಿತು. ಕೋವಿಡ್ 19 ವಿರುದ್ದ ಹೋರಾಡುತ್ತಿರುವ ಸದಸ್ಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಐ.ಎಂ.ಎ ಆದ್ಯಕ್ಷ ಡಾ ಉಮೇಶ್ ಪ್ರಭು, ಡಾ ಪ್ರಕಾಶ್ ಭಟ್, ಡಾ ರಂಜಿತಾ ಎಸ ನಾಯಕ್ ಮತ್ತು ವೈದ್ಯ ಸಿಬ್ಭಂದಿಗಳು ಹಾಜರಿದ್ದರು.