ನಿಟ್ಟೆಯಲ್ಲಿ ತಯಾರಾಯ್ತು ವಿನೂತನ ಸ್ಯಾನಿಟೈಸರ್ ಡಿಸ್ಪೆನ್ಸರ್:ಪೆಡಲ್ ತುಳಿದರೆ ಸಾಕು ಬರುತ್ತೆ ಸ್ಯಾನಿಟೈಸರ್

ನಿಟ್ಟೆ: ಗಾಳಿಯ (pneuamtically operated)ಪಂಪ್ ಸಹಾಯದಿಂದ ನಡೆಸಬಹುದಾದ ಸ್ಯಾನಿಟೈಸರ್ ಡಿಸ್ಪೆನ್ಸರ್ (ವಿತರಕ) ನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ಮಲ್ಲಿಕಪ್ಪ ಅವರು ಅಭಿವೃದ್ಧಿಪಡಿಸಿರುತ್ತಾರೆ. ಇದೊಂದು ಸರಳ ಹಾಗು ಅತ್ಯಂತ ಕಡಿಮೆ ಖರ್ಚಿನಲ್ಲಿ ಅಭಿವೃದ್ಧಿಪಡಿಸಲಾದ ಡಿಸ್ಪೆನ್ಸರ್ ಎಂದು ಅವರು ತಿಳಿಸಿದ್ದಾರೆ. ಈ ಉಪಕರಣದಲ್ಲಿ ಕೆಳಗೆ ನೀಡಲಾದ ಪೆಡಲ್ ನ್ನು ತುಳಿಯುವುದರಿಂದ ಉತ್ಪಾದನೆಗೊಂಡ ಗಾಳಿಯ ಸಹಾಯದಿಂದ ನಿಗದಿತ ಪ್ರಮಾಣದ ಸ್ಯಾನಿಟೈಸರ್ ನಿಮ್ಮ ಕೈ ಸೇರಲಿದೆ ಎಂದು ಸಂಸ್ಥೆ ತಿಳಿಸಿದೆ.