ಪಲ್ಸರ್ ಬೈಕೆಂದರೆ ಈಗಲೂ ಯುವಜನತೆ ಹುಚ್ಚಾಪಟ್ಟೆ ಮಾರುಹೋಗುತ್ತಾರೆ.ಬೈಕ್ ಜಗತ್ತಿನಲ್ಲಿ ಪಲ್ಸರ್ ಉಂಟು ಮಾಡಿರುವ ಕ್ರೇಜ್ ಹಾಗಿದೆ.ವಿಭಿನ್ನ ಮಾದರಿಯ ಪಲ್ಸರ್ ಬೈಕುಗಳು ಈಗಾಗಲೇ ರೋಡಿಗೆ ಮಾತ್ರ ಇಳಿದಿಲ್ಲ.ಹುಡುಗರ ಎದೆಯೊಳಗೂ ಇಳಿದುಬಿಟ್ಟಿದೆ. ಅದೇ ಸಾಲಿಗೆ ಈಗ ಪಲ್ಸರ್ ನ ಇನ್ನೊಂದು ಮಾದರಿಯ ಬೈಕ್ ಸ್ಪರ್ಧೆ ನೀಡಲು ಬಂದಿದೆ.ಹೌದು ಬಜಾಜ್ ಪಲ್ಸರ್ 125 ಹೊಸ ಮಾದರಿಯ ಬೈಕ್ ಜೂ.18 ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದೆ. ಸಿಂಗಲ್ ಸೀಟ್ ಡಿಸ್ಕ್ ಬ್ರೇಕ್ ಪಲ್ಸರ್ 125 ಗಿಂತ 3,597 ರೂಪಾಯಿ ಅಗ್ಗದ ದರಲ್ಲಿ ಲಭ್ಯವಿದ್ದರೆ, ಸಿಂಗಲ್ ಸೀಟ್ ಡ್ರಮ್ ಬ್ರೇಕ್ ಮಾದರಿಗಿಂತ 8,096 ರೂಪಾಯಿ ಹೆಚ್ಚಿನ ಬೆಲೆ ಹೊಂದಿದೆ.
ಇದ್ರಲ್ಲೇನಿದೆ ಸ್ಪೆಷಲ್: ಅಂದಹಾಗೆ ಹೊಸ ಮಾಡೆಲ್ ನ ಪಲ್ಸರ್ ನಲ್ಲಿ ಸ್ಪ್ಲಿಟ್ ಸೀಟ್, ಈ ಹಿಂದಿನ ಮಾಡಲ್ ಗಳಲ್ಲಿ ಸಿಂಗಲ್ ಯುನಿಟ್ ನ ಬದಲು ಸ್ಪ್ಲಿಟ್ ಗ್ರಾಬ್ ರೈಲ್ಸ್ ಇರುವುದು ಈ ಮಾದರಿಯ ವಿಶೇಷತೆಯಾಗಿದೆ.ಇದು ಎಂಟ್ರಿ ಲೆವೆಲ್ ಪಲ್ಸರ್ ನ ಹೊಸ ಮಾದರಿ ,ಇದರ ಎಕ್ಸ್-ಶೋರೂಮ್ ಬೆಲೆಯನ್ನು 79,091 ರೂಪಾಯಿಗಳಿಗೆ ನಿಗದಿ ಮಾಡಲಾಗಿದೆ.ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಮಾದರಿ, ನಿಯೋನ್ ಗ್ರೀನ್ (ಮ್ಯಾಟ್ಟೆ ಬ್ಲ್ಯಾಕ್) ಬ್ಲ್ಯಾಕ್ ಸಿಲ್ವರ್, ಬ್ಲ್ಯಾಕ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.