ಉಡುಪಿ: ಮುಂಬೈಯಿಂದ ಉಡುಪಿ ಜಿಲ್ಲೆಗೆ ಬಂದ 44 ಮಂದಿ ಹಾಗೂ ಸ್ಥಳೀಯ ಲ್ಯಾಬ್ ಟೆಕ್ನಿಷನ್ ಮಗುವಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
45 ಸೋಂಕಿತರ ಪೈಕಿ 30 ಪುರುಷರು, 11 ಮಹಿಳೆಯರು ಹಾಗೂ 4 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಡುಪಿ ತಾಲ್ಲೂಕಿನ 9, ಕುಂದಾಪುರ ತಾಲ್ಲೂಕಿನ 34 ಹಾಗೂ ಕಾರ್ಕಳ ತಾಲ್ಲೂಕಿನ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೊರರಾಜ್ಯದಿಂದ ಬಂದವರ ಪರೀಕ್ಷೆ ಪೂರ್ಣ:
ಹೊರರಾಜ್ಯದಿಂದ ಜಿಲ್ಲೆಗೆ ಬಂದ ಎಲ್ಲರ ಕೊರೊನಾ ಪರೀಕ್ಷೆ ಇಂದಿಗೆ ಪೂರ್ಣಗೊಂಡಿದೆ. ಅಲ್ಲದೆ ಇಂದು 133 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 387 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.