ಮಂಗಳೂರು: ವಿದ್ಯುತ್ ಬಿಲ್ ಕುರಿತಾದ ಗೊಂದಲವನ್ನು ಸರಕಾರ ಇನ್ನೂ ಸರಿಪಡಿಸಿಲ್ಲ. ಸಿಎಂ ಮಾತನ್ನು ಮೆಸ್ಕಾಂನವರು ಕೇಳ್ತಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿದ್ಯುತ್ ಬಿಲ್ ಪ್ರತ್ಯೇಕವಾಗಿ ವಿಂಗಡಿಸಿ ಜನರಿಗೆ ನೀಡಬೇಕಿತ್ತು. ಆದ್ರೆ ಎರಡು ತಿಂಗಳ ಬಿಲ್ ಒಂದೇ ಬಿಲ್ ಗೆ ಸೇರಿಸಿ ನೀಡಿರೋದ್ರಿಂದ ವಿದ್ಯುತ್ ಬಿಲ್ ಹೆಚ್ಚುವರಿಯಾಗಿದೆ. ಹೀಗಾಗಿ ಕೊರೊನಾ ಸಮಯದಲ್ಲಿ ಜನರಿಗೆ ನೊವಿನ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ವಿದ್ಯುತ್ ಬಿಲ್ ಸಮಸ್ಯೆ ಸರಿಪಡಿಸುವಲ್ಲಿ ಸರಕಾರ ತನ್ನ ಮೊಂಡುತನ ತೋರಿಸ್ತಾ ಇದೆ. ಇದರ ವಿರುದ್ಧ ಹೋರಾಡುವುದು ಪ್ರತಿಪಕ್ಷ ನಾಯಕರಿಗೆ ಅನಿವಾರ್ಯವಾಗಿದೆ. ಮೆಸ್ಕಾಂ ಖಾಸಗೀಕರಣ ಮಾಡಲು ಹೊರಟಿರುವದು ಸರಕಾರ ಸಾಧನೆ ಎಂದು ಕಿಡಿಕಾರಿದ ಅವರು ಏರ್ ಪೋರ್ಟ್, ಕಲ್ಲಿದ್ದಲು ನಿಗಮಗಳು, ಬಿ.ಎಸ್.ಎನ್.ಎಲ್ ಇನ್ನಿತರ ಕಂಪನಿಗಳ ಖಾಸಗೀಕರಣ ಮಾಡಲು ಮುಂದಾಗಿದೆ. ಜಿಯೋ ಕಂಪನಿಯನ್ನ ಬ್ರ್ಯಾಂಡ್ ಅಂಬಾಸಿಡರ್ ಮಾಡಲು ಮೋದಿ ಹೊರಟಿದ್ದಾರೆ. ಖಾಸಗಿ ಕಂಪನಿಯನ್ನು ಬದುಕಿಸಲು ಸರಕಾರಿ ಕಂಪನಿ ಮುಚ್ಚಲು ಮುಂದಾಗಿದ್ದಾರೆ. ಭಾವನಾತ್ಮಕವಾಗಿ ಜನರನ್ನ ವಂಚನೆ ಮಾಡಲು ಹೊರಟಿದೆ ಎಂದರು.
ಇನ್ನು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಮೂಲಕ ನೆಹರು ಕುಟುಂಬವನ್ನ ಸರ್ಕಾರ ಟಾರ್ಗೆಟ್ ಮಾಡ್ತಿದೆ. ಇದೆಲ್ಲಾ ಮೋದಿ ಸರಕಾರ ಎರಡನೇ ಅವಧಿಯ ಸಾಧನೆಯಾಗಿದೆ ಎಂದು ಕಿಡಿಕಾರಿದರು.