ಉಡುಪಿ, ಜೂನ್ 4: ಕೋವಿಡ್-19 ರ ಕಾರಣ ದೇಶದಲ್ಲಿ ವಿದಿಸಿರುವ ಲಾಕ್ ಡೌನ್ ನಿಂದ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್ ಗೆ ರೂ. 15,000 ಪರಿಹಾರವನ್ನು ಗರಿಷ್ಟ 1.00 ಹೆಕ್ಟೇರ್ ವಿಸ್ತೀರ್ಣಕ್ಕೆ ಘೋಷಿಸಲಾಗಿದೆ.
ಅದರಂತೆ ಉಡುಪಿ ಜಿಲ್ಲೆಯಲ್ಲಿ ಬಾಳೆ, ಅನಾನಸ್ಸು, ಕಲ್ಲಂಗಡಿ ಹಾಗೂ ಕರಬೂಜ ಬೆಳೆಗಳಿಗೆ ಪರಿಹಾರ ನೀಡಲು ಅವಕಾಶ ಕಲ್ಲಿಸಲಾಗಿರುತ್ತದೆ. ಅನಾನಸ್ಸು ಬೆಳೆಗೆ ಸಂಬಂದಿಸಿದಂತೆ 2019-20 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಯ ಅನುಗುಣವಾಗಿಪರಿಹಾರವನ್ನು ವಿತರಿಸಲಾಗುವುದು. ಆಯ್ಕೆಯಾಗುವ ರೈತರ ಪಟ್ಟಿಯನ್ನು ತೋಟಗಾರಿಕೆ ಇಲಾಖೆಯ ತಾಲೂಕು ಕಛೇರಿ, ತಹಶಿಲ್ದಾರರ ಕಛೇರಿ, ರೈತ ಸಂಪರ್ಕ ಕೇಂದ್ರ ಹಾಗೂ ಸಂಬಂದಿಸಿದ ಗ್ರಾಮ ಪಂಚಾಯತ್ ಗಳಲ್ಲಿ ಪ್ರಕಟಿಸಲಾಗುವುದು.
ಕೋವಿಡ್-19 ನಿಂದಾಗಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ 2020 ನೇ ಮಾರ್ಚ ಮಾಹೆಯ ಕೊನೆಯ ವಾರದಿಂದ ಮೇ ಮಾಹೆಯವರೆಗೆ ಬಾಳೆ (ಅಂತರ ಬೆಳೆ ಹಾಗೂ ಕೈತೋಟ ಬೆಳೆ ಹೊರತುಪಡಿಸಿ ವಾಣಿಜ್ಯ ಬೆಳೆಯಾಗಿ ಬೆಳೆದಿರುವ ರೈತರು), ಕಲ್ಲಂಗಡಿ ಹಾಗೂ ಕರಬೂಜ ಬೆಳೆಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟ ಅನುಭವಿಸಿರುವ ರೈತರು ಅರ್ಜಿ ನಮೂನೆಗಳನ್ನು ಇಲಾಖಾ ಕಛೇರಿಗಳಿಂದ ಪಡೆದು, ಭರ್ತಿ ಮಾಡಿ, ಪಹಣಿ, ಆಧಾರ್ ನ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸ್ವಯಂ ದೃಢಿಕರಣ ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನು ಜೂನ್ 15 ರೊಳಗೆ, ತಾಲೂಕು ತೋಟಗಾರಿಕೆ ಇಲಾಖೆಯ ಕಛೇರಿಗೆ ಸಲ್ಲಿಸುವುದು. ಅರ್ಜಿದಾರರ ಸ್ಥಳ ಪರಿಶೀಲನೆಯನ್ನು ಜಂಟಿ ಪರಿಶೀಲನಾ ತಂಡದಿಂದ ಕೈಗೊಂಡು ನಿಯಮಾನುಸಾರ ಪರಿಹಾರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು.
ಪರಿಹಾರ ಪಾವತಿಸಲು ಇರುವ ಮಾನದಂಡಗಳು:
2020 ನೇ ಮಾರ್ಚ್ 2 ನೇ ವಾರದ ನಂತರ ಕಟಾವಿಗೆ ಬಂದಿರುವ ಫಸಲಿಗೆ ಮಾತ್ರ ಪರಿಹಾರದನವನ್ನು ವಿತರಸಿಸಲಾಗುವುದು, ಈ ಬಗ್ಗೆ ರೈತರು ಸ್ವಯಂ ದೃಡೀಕರಣ, ಮುಚ್ಚಳಿಕೆ ನೀಡಬೇಕು, ಪರಿಹಾರ ಪಾವತಿಸುವ ರೈತರ ಹೆಸರಿನಲ್ಲಿ ಜಮೀನು ಹೋಂದಿರತಕ್ಕದ್ದು, ಜಂಟಿ ಖಾತೆಗಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಸಲ್ಲಿಸಬೇಕು. ಮಹಿಳಾ ಖಾತೆದಾರರಿದ್ದಲ್ಲಿ, ಮಹಿಳೆಯರ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು, ಮಾರ್ಚ್ 4 ನೇ ವಾರದ ನಂತರ ನಾಟಿ ಮಾಡಿದ ಕಲ್ಲಂಗಡಿ ಹಾಗೂ ಕರಬೂಜ ಬೆಳೆಗಳು ಪರಿಹಾರಕ್ಕೆ ಅರ್ಹವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.), ಉಡುಪಿ ಜಿಲ್ಲೆ: 0820-2531950 , ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕುಂದಾಪುರ ತಾಲೂಕು: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕಾರ್ಕಳ ತಾಲೂಕು: 08258-230288 ಇವರನ್ನು ಸಂಪರ್ಕಿಸುವಂತೆ , ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.