ಕುಂದಾಪುರ: ಸಿಡಿಲು ಬಡಿದು ಕರು ಸಹಿತ 3 ದನ ಮೃತಪಟ್ಟ ಘಟನೆ ರವಿವಾರ ಸಂಜೆ ಹೆಂಗವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮ್ಗೋಳಿಯಲ್ಲಿ ಸಂಭವಿಸಿದೆ.
ಕಮ್ಗೋಳಿಯ ನಿವಾಸಿ ಸಂತೋಷ್ ಅವರು ಸಾಕಿದ್ದ ದನಗಳು ಸಿಡಿದು ಬಡಿದು ಸಾವನ್ನಪ್ಪಿವೆ.
ಘಟನಾ ಸ್ಥಳಕ್ಕೆ ಹೆಂಗವಳ್ಳಿ ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡ ದನಗಳಾಗಿದ್ದರಿಂದ ಸುಮಾರು 1 ಲಕ್ಷ ರೂ. ಗೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಿಲಾಗಿದೆ.