ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಬಂದ 11 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 81 ಕ್ಕೆ ಏರಿಕೆಯಾಗಿದೆ.
11 ಮಂದಿಯಲ್ಲಿ 7 ಮಂದಿ ಮಹಿಳೆಯರಿಗೆ 4 ಮಂದಿ ಪುರುಷರಿಗೆ ಕೊರೊನಾ ದೃಢಪಟ್ಟಿದೆ.
35 ವರ್ಷದ ಗಂಡು, 36 ವರ್ಷದ ಹೆಣ್ಣು, 46 ವರ್ಷದ ಗಂಡು, 11 ವರ್ಷದ ಬಾಲಕಿ, 59 ವರ್ಷದ ಮಹಿಳೆ, 3 ವರ್ಷದ ಹೆಣ್ಣು ಮಗು, 37 ವರ್ಷದ ಹೆಣ್ಣು, 45 ವರ್ಷದ ಹೆಣ್ಣು, 22 ವರ್ಷದ ಗಂಡು, 39 ವರ್ಷದ ಗಂಡು, 17 ವರ್ಷದ ಯುವತಿಗೆ ಕೊರೊನಾ ದೃಢಪಟ್ಟಿದೆ. ಇವರೆಲ್ಲರೂ ಮುಂಬಯಿನಿಂದ ಬಂದು ಕ್ವಾರಂಟೈನ್ ನಲ್ಲಿದ್ದು ಇದೀಗ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.