ಉಡುಪಿ: ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದ 8 ಮಕ್ಕಳು ಸೇರಿದಂತೆ ಇಂದು ಹೊಸದಾಗಿ ಜಿಲ್ಲೆಯಲ್ಲಿ 16 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಮಧ್ಯಾಹ್ನ ಬಿಡುಗಡೆಗೊಂಡ ರಾಜ್ಯ ಕೊರೊನಾ ಬುಲೆಟಿನ್ ನಲ್ಲಿ ಮಾಹಿತಿ ತಿಳಿದುಬಂದಿದೆ. ಜಿಲ್ಲೆಯಲ್ಲಿ ಪತ್ತೆಯಾದ 16 ಕೊರೊನಾ ಸೋಂಕಿತರ ಪೈಕಿ 14 ಮಂದಿ ಮುಂಬೈ ಹಾಗೂ ಇಬ್ಬರು ದುಬೈನಿಂದ ಬಂದಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.