ಮಂಗಳೂರು: ಕೊರೊನಾ ಸೋಂಕಿತ ಓರ್ವ ಮಹಿಳೆ ಗುಣಮುಖರಾಗಿ ನಗರದ ವೆನ್ಲಾಕ್ ಆಸ್ಪತ್ರೆಯಿಂದ ಸೋಮವಾರ ಡಿಸ್ಚಾರ್ಜ್ ಆಗಿದ್ದಾರೆ.
ಬಂಟ್ವಾಳ ಮೂಲದ ವೃದ್ದೆ ಕೊರಾನಾದಿಂದ ಚಿಕಿತ್ಸೆ ಫಲಕಾರಿ ಮೃತಪಟ್ಟಿದ್ದರು. ನಂತರ ವೃದ್ಧೆ ಮಗಳಿಗೂ ಕೊರೊನಾ ತಗುಲಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಮಹಿಳೆ ಕೊರೊನಾದಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 31 ಪ್ರಕರಣ ಪತ್ತೆಯಾಗಿದ್ದು, 14 ಮಂದಿ ಕೊರೊನಾದಿಂದ ಗುಣಮುಖವಾಗಿ ಡಿಸ್ಚಾರ್ಜ್ ಆಗಿದ್ದು, ಮೂರು ಮಂದಿ ಮೃತಪಟ್ಟಿದ್ದಾರೆ.
ಸದ್ಯ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದರಲ್ಲಿ 12 ರೋಗಿಗಳು ಚಿಕಿತ್ಸೆಗೆ ಉತ್ತಮ ಸ್ಪಂದಿಸುತ್ತಿದ್ದಾರೆ. 80 ವರ್ಷದ ಕೊರೊನಾ ಪೀಡಿತ ಮಹಿಳೆ ಅಧಿಕ ರಕ್ತದ ಒತ್ತಡ ಹಾಗೂ ಪಾರ್ಶ್ವಾವಾಯುನಿಂದ ಬಳಲುತ್ತಿದ್ದ ಮಹಿಳೆ ಸ್ಥಿತಿ ನಾಜೂಕಾಗಿದ್ದು, 58 ವರ್ಷದ ಕೊರೊನಾ ಪೀಡಿತ ಮಹಿಳೆ ಮೆದುಳಿನ ಸೋಂಕಿನಿಂದ ಬಳಲುತ್ತಿದ್ದಾರೆ. ಅವರಿಗೆ ವೆಂಟಿಲೇಟರ್ ಅಳವಡಿಸಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.