ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಮದ್ಯೆ ಜನ ಸಂಚಾರಕ್ಕೆ ಇದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ಸಡಿಲಿಕೆ ಮಾಡಿದೆ. ಇನ್ನು ಮುಂದೆ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಯಾವುದೇ ಅಂತರ್ ಜಿಲ್ಲಾ ಪಾಸ್ ವ್ಯವಸ್ಥೆ ಇಲ್ಲದೆ ಉದ್ಯೋಗಸ್ಥರು ಆರಾಮಾಗಿ ಓಡಾಟ ಮಾಡಲು ಸರಕಾರ ವ್ಯವಸ್ಥೆ ಮಾಡಿದೆ.
ಉದ್ಯೋಗಸ್ಥರು ತಾವು ಕೆಲಸ ಮಾಡುತ್ತಿರುವ ಕಂಪನಿ, ಸಂಸ್ಥೆಯಿಂದ ನೀಡಲಾಗುವ ಪತ್ರದ ಮೇರೆಗೆ ಮತ್ತು ಕಂಪನಿ ಸಂಸ್ಥೆಯ ಗುರುತಿನ ಚೀಟಿಯನ್ನು ಓಡಾಟದ ಸಮಯದಲ್ಲಿ ಜೊತೆಗಿಟ್ಟುಕೊಳ್ಳಬೇಕೆಂದು ಸರಕಾರ ತಿಳಿಸಿದೆ.