ಉಡುಪಿ: ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ವಿದೇಶದಿಂದ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ಇಂದು ಕುಂದಾಪುರದಲ್ಲಿ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಕರೆ ಬಗ್ಗೆ ಡಿಜಿಐಜಿ ಪ್ರವೀಣ್ ಸೂದ್ ಬಳಿ ಮಾತನಾಡಿದ್ದೇನೆ. ವಿದೇಶದಿಂದ ಕರೆ ಬರುತ್ತಿರುವ ಸಂಖ್ಯೆಯನ್ನು ನೀಡಿದ್ದೇನೆ ಎಂದು ಹೇಳಿದರು.
ಪಿಎಫ್ಐ ಹಾಗೂ ಎಸ್ ಡಿಪಿಐ ವಿರುದ್ಧ ಮಾತನಾಡಿದಾಗ ಇಂತಹ ಕರೆ ಬರುತ್ತೆ. ಹಿಂದೂ ಯುವಕರ ಹತ್ಯೆಯಾದ ಬಗ್ಗೆ ಮಾತನಾಡಿದಾಗ ಕರೆ ಬರುತ್ತೆ. ಕಳೆದ 2 ವರ್ಷದಿಂದ ಇಂತಹ ಕರೆ ಬರುತ್ತಿದ್ದ ಬಗ್ಗೆ ಈ ಹಿಂದೆಯೂ ದೂರು ಕೊಟ್ಟಿದ್ದೆ ಎಂದು ತಿಳಿಸಿದರು.
ಇತ್ತೀಚೆಗೆ ತಬ್ಲಿಘಿ ಬಗ್ಗೆ ಮಾತನಾಡಿದ್ದಕ್ಕೆ ಹೀಗೆ ಕರೆಗಳು ಬರುತ್ತಿದೆ. ಇಂತಹ ಕರೆ ಮಾಡುವರ ಪತ್ತೆ ಮಾಡುವ ಕಾರ್ಯವಾಗಬೇಕು. ಆದರೆ ಈ ವಿಚಾರದಲ್ಲಿ ನನಗೆ ಪೊಲೀಸರ ಭದ್ರತೆ ಬೇಡ, ಕಾರ್ಯಕರ್ತರು ನನ್ನ ಜೊತೆಗಿದ್ದಾರೆ ಎಂದರು.
ಕೊರೋನಾ ಸಂದರ್ಭ ಪೊಲೀಸರ ಶ್ರಮ ಹೆಚ್ಚಿರುತ್ತೆ. ಅದಕ್ಕೆ ಇರುವ ಇಬ್ಬರು ಗನ್ ಮ್ಯಾನ್ ಕೂಡ ವಾಪಾಸ್ ನೀಡಿರುವೆ. ನನಗೆ ಕಾರ್ಯಕರ್ತರು ಮತ್ತು ಜನರೇ ಶ್ರೀ ರಕ್ಷೆ ಎಂದು ಅಭಿಪ್ರಾಯಪಟ್ಟರು.