ನಾಳೆಯಿಂದ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ದಂತ ಚಿಕಿತ್ಸಾಲಯಗಳು ಸೇವೆಗೆ ಲಭ್ಯ 

ಮಣಿಪಾಲ: ಮಣಿಪಾಲ ವೈದ್ಯಕೀಯ ಕಾಲೇಜಿನ ದಂತ ಚಿಕಿತ್ಸಾಲಯಗಳು ನಾಳೆ (ಮೇ 5) ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರ ವರೆಗೆ ತೆರೆಯಲಿದೆ ಎಂದು ಕಾಲೇಜಿನ ಡೀನ್ ಡಾ. ಕೀರ್ತಿಲತಾ ಎಂ ಪೈ ತಿಳಿಸಿದ್ದಾರೆ.
ದಂತ ಚಿಕಿತ್ಸಾಲಯಗಳಿಗೆ ಪ್ರವೇಶಿಸುವ ಮೊದಲು ರೋಗಿಗಳು ಕಸ್ತೂರ್ಬಾ ಆಸ್ಪತ್ರೆ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಶಿಬಿರದಲ್ಲಿ ಭೇಟಿ ನೀಡಿ ಬಳಿಕ ದಂತ ಚಿಕಿತ್ಸಾಲಯಕ್ಕೆ ಬರಬೇಕು ಎಂದು ಸೂಚಿಸಿದ್ದಾರೆ.