ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಇದ್ದ 179 ಮಂದಿ ವಲಸೆ ಕಾರ್ಮಿಕರನ್ನು ಬಸ್ ಮೂಲಕ ಅವರ ಊರಿನತ್ತ ಕಳುಹಿಸಿಕೊಡಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ವಲಸೆ ಕಾರ್ಮಿಕರು ಬೆಳ್ತಂಗಡಿ ತಾಲೂಕಿನ ವಿವಿಧೆಡೆ, ಕಟ್ಟಡ ನಿರ್ಮಾಣ, ಮನೆ ಕೆಲಸ ಹೀಗೆ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್ಡೌನ್‌ನಿಂದಾಗಿ ಯಾರಿಗೂ ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಇವರೆಲ್ಲ ಬೆಳ್ತಂಗಡಿಯ ಆಶ್ರಯ ಕೇಂದ್ರಗಳಲ್ಲಿದ್ದ ಆಶ್ರಯ ಪಡೆದುಕೊಂಡಿದ್ದರು. ಆದ್ರೆ ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಕಳೆದ ಹಲವು ದಿನಗಳಿಂದ ಜನ ಪ್ರತಿನಿಧಿಗಳಲ್ಲಿ ತಮ್ಮ ಬೇಡಿಕೆ ಇಟ್ಟಿದ್ರು, ಹೀಗಾಗಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆಯ ಬಳಿಕ ಮಾಡಿ ಸರ್ಕಾರದ ಸೂಚನೆಯ ಪ್ರಕಾರ ಬೆಳ್ತಂಗಡಿ ತಾಲೂಕು ಪಂಚಾಯತ್ ಧರ್ಮಸ್ಥಳದಿಂದ ಬಸ್ ಮೂಲಕ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಿ ಕೊಟ್ಟಿದೆ.