ಉಡುಪಿ: ಕುತ್ಪಾಡಿ ಗ್ರಾಮದ ಪಡುಕೆರೆ ಕಡಲತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲ ಮೀನು ಪತ್ತೆಯಾಗಿದೆ. ಸಮುದ್ರದಲ್ಲಿ ತೇಲಿಬಂದ ಭಾರಿ ಗಾತ್ರದ ತಿಮಿಂಗಿಲ ಮೀನಿಗೆ ಸಮುದ್ರದ ದಡದಲ್ಲಿ ಈಜಲು ನೀರು ಸಾಲದೆ ಅಸುನೀಗಿದೆ. ಕಡಲತೀರದಲ್ಲಿ ಪತ್ತೆಯಾದ ಮೀನನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.
ಈ ಮೀನು ಸುಮಾರು 25 ಅಡಿ ಉದ್ದವಿದ್ದು, ತೀರ ಪ್ರದೇಶದಲ್ಲಿ ಕಾಣ ಸಿಗುವುದು ಬಹಳ ಅಪರೂಪ. ತಿನ್ನಲು ಯೋಗ್ಯವಲ್ಲದ ಈ ಮೀನನ್ನು ಜೆಸಿಬಿಯ ಮೂಲಕ ಕಡಲ ತೀರ ಪ್ರದೇಶದಲ್ಲಿ ಬೃಹತ್ ಗುಂಡಿ ತೆಗೆದು ಹೂಳಲಾಯಿತು.