ಮಂಗಳೂರು: ಕ್ವಾರಂಟೈನ್ ನಲ್ಲಿದ್ದಂತಹ ಐವರು ವಿದೇಶಿಗರು ಆದೇಶ ಉಲ್ಲಂಘಿಸಿ ತಿರುಗಾಡಿದ್ದಲ್ದೇ ಅಪಾರ್ಟ್ ಮೆಂಟ್ ನ ಗೋಡೆಗಳಿಗೆ ಉಗಿಯುವ ಮೂಲಕ ಆತಂಕ ಸೃಷ್ಠಿಸಿದ ಘಟನೆ ಮಂಗಳೂರು ನಗರದ ಕೊಡಿಯಲ್ ಬೈಲ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದೆ.
ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆಂದು ವಿಯೆಟ್ನಾಂ ನಿಂದ ಮೂರು ತಿಂಗಳ ಹಿಂದೆ ಆಗಮಿಸಿದ್ದ ಮೂವರು ಯುವಕರು ಹಾಗೂ ಇಬ್ಬರು ಯುವತಿಯರು ಒಟ್ಟು 5 ಮಂದಿ, ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ 5 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಿತ್ತು. ಆದರಲ್ಲಿ ಈ ಇಬ್ಬರು ಯುವಕರು ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿ ಅಪಾರ್ಟ್ ಮೆಂಟ್ ಸುತ್ತ ಬೇಕಾಬಿಟ್ಟಿ ತಿರುಗುತ್ತಿದ್ದರು. ಇದರಿಂದ ಆತಂಕ ಸೃಷ್ಟಿಯಾಗಿತ್ತು. ಈ ಮಧ್ಯೆ ಅಪಾರ್ಟ್ ಮೆಂಟ್ ನ ಲಿಫ್ಟ್ ನ ಗೋಡೆಗಳಲ್ಲಿ ಉಗಿದಿರುವ ಕುರುಹು ಪತ್ತೆಯಾಗಿದೆ.
ಈ ಹಿನ್ನೆಲೆ ಅಪಾರ್ಟ್ ಮೆಂಟ್ ಅಸೋಶಿಯೇಸನ್ ಅವರು ಸಿಸಿಟಿವಿ ವೀಕ್ಷಿಸಿದಾಗ ಇಬ್ಬರು ವಿದೇಶಿಗರು ಲಿಫ್ಟ್ ನಲ್ಲಿ ಮಾಸ್ಕ್ ತೆಗೆದು ತಿರುಗಾಡುತ್ತಿದ್ದು ಕಂಡು ಬಂದಿದೆ. ಅಲ್ದೇ ಲಿಫ್ಟ್ ನ ಒಳಗೆ ಉಗಿದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಹೀಗಾಗಿ ಅಪಾರ್ಟ್ ಮೆಂಟ್ ನ ಅಸೋಶಿಯೇಷನ್ ನವರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಆರೋಗ್ಯ ಅಧಿಕಾರಿಗಳು 5 ಮಂದಿ ವಿದೇಶಿಗರನ್ನು ವಶಕ್ಕೆ ತೆಗೆದುಕೊಂಡು ಆರೋಗ್ಯ ಪರೀಕ್ಷೆಗಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ತನಿಖೆ ನಡಿತಿದೆ.