ಮಂಗಳೂರು: ಸದ್ಯ ಕೊರೊನಾ ಭೀತಿಯಿಂದ ಯಾರಾದರೂ ಹೊಸಬರು ಅಥವಾ ತಮ್ಮದೇ ಊರವರು ದೂರದ ಊರಿನಿಂದ ಬಂದ್ರೆ ಜನರಿಗೆ ಸಹಜವಾಗಿಯೇ ಹೆದರಿಕೆ ಉಂಟಾಗುತ್ತದೆ.
ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮಕ್ಕೆ ತಮಿಳುನಾಡಿನಿಂದ ಒಂದು ಕುಟುಂಬ ಬೈಕ್ ಮೂಲಕ ಬಂದಿದ್ದು, ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ.
ಇಲ್ಲಿನ ಓಟಕಜೆ ಸಿ.ಆರ್.ಸಿ ಕಾಲೋನಿಗೆ ತಂದೆ, ತಾಯಿ ಮತ್ತು 2 ಮಕ್ಕಳು ತಮಿಳುನಾಡಿನ ಕೋಯಂಮುತ್ತೂರಿನಿಂದ ಕರ್ನಾಟಕಕ್ಕೆ ಬೈಕ್ ನಲ್ಲಿ ಮೆಡಿಕಲ್ ಎಮರ್ಜೆನ್ಸಿ ಸ್ಟಿಕ್ಕರ್ ಹಾಕಿಕೊಂಡು ಬಂದಿದ್ದು, ಆಗಮಿಸುವಾಗ ಪೊಲೀಸರು ಎಲ್ಲೂ ತಪಾಸಣೆಗೆ ಒಳಪಡಿಸಿಲ್ಲವೇ ಎಂಬುದು ಆಶ್ಚರ್ಯಕರವಾದ ವಿಚಾರ. ನೂರಾರು ಕಿಮೀ ಮಕ್ಕಳ ಸಮೇತ ಇವರು ಮೆಡಿಕಲ್ ಎಮರ್ಜೆನ್ಸಿ ಸ್ಟಿಕ್ಕರ್ ಹಾಕಿಕೊಂಡು ಬಂದಿರುವ ಬಗ್ಗೆ ತನಿಖೆಯಾಗಬೇಕು ಎಂಬುದಾಗಿ ಸ್ಥಳೀಯ ಕಾಲೋನಿ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಓಟೆಕಜೆ ಕಾಲೋನಿಯಲ್ಲಿ ಸುಮಾರು 40 ಕುಟುಂಬಗಳು ಇಲ್ಲಿ ವಾಸಿಸುತ್ತಾರೆ. ಕಾಲನಿಯಲ್ಲಿ ಈಗ ಭಯದ ವಾತಾವರಣ ಶುರು ಆಗಿದೆ.