ಜಮ್ಮು- ಕಾಶ್ಮೀರ: 24 ಗಂಟೆಗಳ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ 9 ಮಂದಿ ಉಗ್ರರು ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ..ಕೆರೆನ್ ಸೆಕ್ಟರ್‌ನಲ್ಲಿ 5 ಮಂದಿ ಉಗ್ರರು ಒಳಬರಲು ನುಸುಳುತ್ತಿದ್ದಾಗ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.ದಕ್ಷಿಣ ಕಾಶ್ಮೀರದ ಬಟ್ಪುರದಲ್ಲಿ ಶನಿವಾರ 4 ಮಂದಿ ಉಗ್ರರು ಭಾರತೀಯ ಗಡಿ ನಿಯಂತ್ರಣ ರೇಖೆಯನ್ನು ದಾಟಲು ಯತ್ನಿಸುತ್ತಿದ್ದಾಗ ಸೈನಿಕರ ಗುಂಡಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ
 
								 
															





 
															 
															 
															











