ರಾಜ್ಯ: ಕೊರೋನಾ ರಾಜ್ಯದಲ್ಲಿ ತನ್ನ ಕಬಂಧಬಾಹುವನ್ನು ಇನ್ನಷ್ಟು ವಿಸ್ತರಿಸಿದ್ದು, ಭಟ್ಕಳದ ಇಬ್ಬರು ವ್ಯಕ್ತಿಗಳಿಗೆ ಇದೀಗ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿದೆ.
ದುಬೈನಿಂದ ಭಟ್ಕಳಕ್ಕೆ ಬಂದ ಇಬ್ಬರಲ್ಲಿ ಕೊರೊನಾ ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ ಹರೀಶ್ ಕುಮಾರ್ ತಿಳಿಸಿದ್ದಾರೆ
ಇಬ್ಬರಿಗೆ ಬಂತು ಕೊರೋನಾ:
ಮಾರ್ಚ್ 21ಕ್ಕೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ 40 ವರ್ಷದ ಪುರುಷ, ತಮ್ಮದೇ ವಾಹನದಲ್ಲಿ ಸಹೋದರ ಸಂಬಂಧಿ ಭಟ್ಕಳದ ಮನೆಗೆ ಬಂದಿದ್ದರು. ನಂತರ ಅರ್ಧ ಗಂಟೆ ಮನೆಯಲ್ಲಿದ್ದು ತಾಲೂಕು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡರು ಅವರ ಗಂಟಲುದ್ರರವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.ಇದೀಗ ಇವರಿಗೆ ಕೊರೋನಾ ಬಂದಿರುವುದು ಸಾಭೀತಾಗಿದೆ.
ಇನ್ನೋರ್ವ ವ್ಯಕ್ತಿ 65 ವರ್ಷದವನಾಗಿದ್ದು ಮಾ.18ಕ್ಕೆ ದುಬೈನಿಂದ ಹೊರಟು ಮುಂಬೈಗೆ ಬಂದಿದ್ದರು ಅಲ್ಲಿಂದ 19ರಂದು ರೈಲಿನಲ್ಲಿ ಹೊರಟು 20ಕ್ಕೆ ಭಟ್ಕಳದ ಮನೆಗೆ ತಲುಪಿದ್ದರು. ಇವರಿಗೆ ತಪಾಸಣೆ ನಡೆಸಿದಾಗ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು ಅವರನ್ನು ಮನೆಯಲ್ಲಿ ಬಂಧನದಲ್ಲಿಡಲಾಗಿತ್ತು ಇವರಿಗೂ ಈಗ ಕೊರೋನಾ ಬಂದಿದೆ.
ಗರಂ ಆದ ಭಟ್ಕಳ:
ಇದೀಗ ಭಟ್ಕಳದ ಜನತೆಯೇ ಕಂಗಾಲಾಗಿದ್ದಾರೆ. ಭಟ್ಕಳ ಪಟ್ಟಣವನ್ನೇ ಕ್ಲಸ್ಟರ್ ಎಂದು ಪರಿಗಣಿಸಲಾಗಿದ್ದು, ಅಲ್ಲಿಗೆ ಹೋಗುವುದು ಮತ್ತು ಬರುವುದನ್ನು ನಿಷೇಧಿಸಲಾಗಿದೆ. ಅಲ್ಲಿ ಫ್ಯೂಮಿಗೇಶನ್ ಮಾಡಲಾಗಿದೆ.