ಕಡಬ: ಅನಾರೋಗ್ಯದಿಂದ ಪ್ರತಿಭಾನ್ವಿತ ಯುವತಿ ಸಾವು 

ಪುತ್ತೂರು: ಕಳೆದೆರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಪ್ರತಿಭಾನ್ವಿತ ಯುವತಿ ವೀಕ್ಷಿತಾ(27) ಅವರು ಮಾ. 20 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಈಕೆ ಪ್ರತಿಷ್ಠಿತ ಇನ್ಪೋಸಿಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಆಮೇರಿಕಾ ಹಾಗೂ ಬೆಂಗಳೂರಿನಲ್ಲಿ ಉದ್ಯೋಗ ನಿರ್ವಹಿಸಿದ್ದರು. ಕಡಬ ಪಿಜಕ್ಕಳ ಕಲ್ಲರ್ಪೆ ನಿವಾಸಿ ಪುಟ್ಟಣ್ಣ ಗೌಡರ ಪುತ್ರಿಯಾದ ವೀಕ್ಷಿತಾ ರವರು ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದರು. ಬಳಿಕ ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದರು. ಇದರ ಮಧ್ಯೆ ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಈಕೆ ವಾಪಸು ಮನೆಗೆ ಬಂದು, ಇಲ್ಲಿಯೇ ಚಿಕಿತ್ಸೆ ಪಡೆಯುತಿದ್ದರು. ಮೃತರು ತಾಯಿ ಯಶೋಧಾ ಸಹೋದರಿಯರಾದ ಅಕ್ಷತಾ, ರಕ್ಷಿತಾ ಅವರನ್ನು ಅಗಲಿದ್ದಾರೆ.